ದೆಹಲಿ: ಇಂದು ದೇಶದೆಲ್ಲೆಡೆ ರಕ್ಷಾ ಬಂಧನ ಹಬ್ಬವನ್ನು ಬಹಳ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸೋದರಿಯರು ತಮ್ಮ ಪ್ರೀತಿಯ ಸೋದರರಿಗೆ ರಾಖಿ ಕಟ್ಟಿ ಖುಷಿ ಪಡುತ್ತಾರೆ. ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಏನಾದರೂ ಉಡುಗೊರೆ ನೀಡಿ ಸಹೋದರಿಯನ್ನು ಖುಷಿ ಪಡಿಸುತ್ತಾರೆ.
ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ನಾಳೆ ಮೋದಿ ಆಗಮನ
ಹೌದು, ಪ್ರಧಾನಿ ನಿವಾಸಕ್ಕೆ ದೆಹಲಿಯ ಶಾಲಾ ಮಕ್ಕಳು ಭೇಟಿ ನೀಡಿ ಪ್ರಧಾನಿ ಮೋದಿಗೆ ಸೋದರತ್ವದ ಸಂಕೇತವಾದ ರಾಖಿಯನ್ನು ಕಟ್ಟಿದ್ದರು. ಪ್ರಧಾನಿ ಮೋದಿ ಖುಷಿಯಿಂದ ಶಾಲಾ ಮಕ್ಕಳ ಜೊತೆ ಬೆರೆತು, ಮಾತನಾಡಿ ರಾಖಿ ಕಟ್ಟಿಸಿಕೊಂಡರು. ಮಕ್ಕಳಿಗೆ ಚಾಕಲೇಟ್ ಸೇರಿದಂತೆ ಗಿಫ್ಟ್ ನೀಡಿದ್ದರು.
