ಜಾನುವಾರುಗಳ ಸಾವು: ರೈತರಲ್ಲಿ ಆತಂಕ

ಜಾನುವಾರುಗಳ ಸಾವು: ರೈತರಲ್ಲಿ ಆತಂಕ

ಯಾದಗಿರಿ : ವ್ಯವಸಾಯಕ್ಕೆ ರೈತನಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಗೋವುಗಳು ಯಾವುದೇ ರೋಗದ ಲಕ್ಷಣಗಳು ಕಾಣದೇ ಏಕಾ ಏಕಿ ಸಾವನ್ನಪ್ಪುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಕಳೆದ ಒಂದು ವಾರದಲ್ಲಿ ಅತ್ಯಧಿಕ ಗೋವುಗಳು ಸಾವನ್ನಪ್ಪಿದ್ದು, ರೈತರಲ್ಲಿ ಭಯ ಮೂಡಿಸಿದೆ. ಸುರಪುರ ತಾಲೂಕಿನ ಯಾಳಗಿ ಗ್ರಾಮದ ರೈತ ಕಂಠೆಪ್ಪ ಅಗಸರ ಎಂಬಾತ ರೈತ ಎಂದಿನಂತೆ ಎತ್ತುಗಳನ್ನು ಗಾಡಿ ಕಟ್ಟಿಕೊಂಡು ಜಮೀನಿಗೆ ತೆರಳಿ ಮನೆಗೆ ಬಂದಾಗ ಒಂದು ಎತ್ತು ಬಿದ್ದು ಹೊರಳಾಡ ತೊಡಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಸತ್ತು ಹೋಗಿದೆ.

ಲಕ್ಷಾಂತರ ರೂಪಾಯಿ ನೀಡಿ ಖರೀದಿಸಿದ್ದ ಗೋವುಗಳ ಸಾವು ರೈತರ ಪಾಲಿಗೆ ಸಿಡಿಲು ಬಡಿದಂತಾಗುತ್ತಿದೆ .
ಸರ್ಕಾರ ಬಡ ರೈತ ಕುಟುಂಬದ ಪಶುಗಳ ಪಾಲನೆಗೆ ಸೂಕ್ತ ನೆರವು ಚಿಕಿತ್ಸೆ ನೀಡಬೇಕೆಂಬುದು ರೈತರ ಮನವಿಯಾಗಿದೆ.

ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಹಾಗೂ ಪಶು ಪಾಲನೆ ಮಂತ್ರಿಗಳು ಜಾನುವಾರುಗಳು ಸಾವನ್ನಪ್ಪುತ್ತಿವೆ ಇನ್ನಾದರೂ ಎಚ್ಚ್ಚೆತ್ತುಕೊಂಡು ರೈತರಿಗೆ ಸಹಾಯ ಧನದ ಮೂಲಕ ನೆರವಾಗಿ ಮತ್ತು ಪಶು ಸಾವನ್ನಪ್ಪದಂತೆ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದು ಯಾಳಗಿ

ಕಾಂಗ್ರೆಸ್ ಯುವ ಮುಖಂಡ ಪ್ರಶಾಂತಗೌಡ ಗೋರಗೋರಿ ತಿಳಿಸಿದ್ದಾರೆ.

Related