ಕಸಾಪ ಅಧ್ಯಕ್ಷ ಸ್ಥಾನ ವಾಲ್ಮೀಕಿ ಸಮುದಾಯಕ್ಕೆ ನೀಡಲು ಒತ್ತಾಯ

ಕಸಾಪ ಅಧ್ಯಕ್ಷ ಸ್ಥಾನ ವಾಲ್ಮೀಕಿ  ಸಮುದಾಯಕ್ಕೆ ನೀಡಲು ಒತ್ತಾಯ

ದೇವದರ್ಗ : ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರ ಸ್ಥಾನವನ್ನು ಇದುವರೆಗೂ ಪಡೆಯದೆ ಇರುವ ಮತ್ತು ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ವಾಲ್ಮೀಕಿ ನಾಯಕ ಸಮಾಜಕ್ಕೆ ನೀಡಬೇಕೆಂದು ಅಖಿಲ ರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಾಮಣ್ಣನಾಯಕ ಡಿ. ಕರಡಿಗುಡ್ಡ ಒತ್ತಾಯಿಸಿದರು.

ಮಂಗಳವಾರದಂದು ಬೆಳಿಗ್ಗೆ ಪಟ್ಟಣದ ಸುದ್ದಿಮೂಲ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯನ್ನೋದ್ದೇಶಿಸಿ ಮಾತನಾಡಿ, ತಾಲ್ಲೂಕಿನಲ್ಲಿ ಇರುವ ಬಹುತೇಕ ಎಲ್ಲಾ ಸಮುದಾಯದ ಗಣ್ಯರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರುಗಳಾಗಿ ಉತ್ತಮ ಕರ್ಯನರ್ವಹಣೆ ಮಾಡಿದ್ದು ಅದರಂತೆ ಇವರೆಲ್ಲರ ಹಾದಿಯಾಗಿ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸ್ಥಾನ ನಮ್ಮ ಸಮಾಜಕ್ಕೆ ಸಿಕ್ಕಿರುವದಿಲ್ಲಾ ಹಾಗಾಗಿ ಪ್ರಥಮ ಬಾರಿಗೆ ತಾಲ್ಲೂಕಿನಿಂದ ರಂಗಣ್ಣ ಪಾಟೀಲ್ ಅಳುಂಡಿ ಅವರು ಕಸಾಪ ಜಿಲ್ಲಾಧ್ಯಕ್ಷರಾಗಿ ತಾಲ್ಲೂಕಿನ ಕಿರ್ತಿಯನ್ನು ಹೆಚ್ಚಿಸಿದ್ದಾರೆ.

ಅವರಿಗೂ ಮತ್ತು ಅಜೀವ ಸದಸ್ಯರಿಗೂ ಸಮಾಜವು ಅಭಿನಂದಿಸುತ್ತದೆ ಹಾಗೂ ನಮ್ಮ ವಾಲ್ಮೀಕಿ ಸಮುದಾಯದ ಸಹಕಾರವನ್ನು ಪರಿಗಣಿಸಿ ತಾಲ್ಲೂಕು ಅಧ್ಯಕ್ಷ ಸ್ಥಾನವನ್ನು ನಮ್ಮ ವಾಲ್ಮೀಕಿ ನಾಯಕ ಸಮಾಜಕ್ಕೆ ನೀಡಬೇಕೆಂದು ನೂತನವಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿರುವ ರಂಗಣ್ಣ ಪಾಟೀಲ್ ಅಳುಂಡಿ ಅವರಿಗೂ ನಮ್ಮ ಸಮುದಾಯಕ್ಕೆ ತಾಲ್ಲೂಕು ಅಧ್ಯಕ್ಷ ಸ್ಥಾನ ನೀಡುವಂತೆ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಗಿದೆ ಹೇಳಿದರು.

ಈ ಸಂರ್ಭದಲ್ಲಿ ವಾಲ್ಮೀಕಿ ಸಂಘಟನೆಯ ಉಪಾಧ್ಯಕ್ಷ ಕೂಡ್ಲಿಗೇಯ್ಯ ಗೌರಂಪೇಟ್, ಸಂಘಟನೆ ಕಾರ್ಯರ್ಶಿ ವೆಂಕಟೇಶ ಸೋಮಕಾರ, ಮರ್ಕಂಡೇಯ ನಾಡದಾಳು, ಹನುಮಂತ ರ್ಶೇ ಮತ್ತು ಅಂಜಿನಯ್ಯ ತಿಲಕ್ ಓಣಿ, ರಮೇಶ್ ಸಿಪ್ಪತಗೇರಾ, ನಾಗರಾಜ ಸೋಮಕಾರ, ನಾಗರಾಜ್ ತೆಗ್ಯಾಳು ಗೌರಂಪೇಟ್ ಇನ್ನಿತರರಿದ್ದರು.

Related