ಆರ್‌ಸಿಬಿ ಟೀಮ್‍ನಲ್ಲಿ ಬದಲಾವಣೆ?

ಆರ್‌ಸಿಬಿ ಟೀಮ್‍ನಲ್ಲಿ ಬದಲಾವಣೆ?

ದುಬೈ: ಈ ಬಾರಿಯ ಐಪಿಎಲ್ ಟೂರ್ನಿ ಕ್ರಿಕೆಟ್ ಪ್ರೇಮಿಗಳಿಗೆ ಒಳ್ಳೆಯ ರಸದೌತಣ ಉಣಬಡಿಸುತ್ತಿದೆ. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬವೋ ಹಬ್ಬ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ಅದ್ದೂರಿಯಾಗಿಯೇ ಎಂಟ್ರಿ ಕೊಟ್ಟು ಮುಂದಿನ ಪಂದ್ಯಗಳಲ್ಲಿ ಕುತೂಹಲ ಉಳಿಸಿಕೊಳ್ಳುವಂತೆ ಮಾಡಿದೆ.

ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 10 ರನ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮುಂದಿನ ಪಂದ್ಯದ ತಯಾರಿಯಲ್ಲಿರುವ ಆರ್‌ಸಿಬಿ ಕರ್ನಾಟಕದ ಆಟಗಾರರಿಂದಲೇ ಕೂಡಿರುವ ಕಿಂಗ್ಸ್ ಇಲೆವನ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಈ ವೇಳೆ ಕೊಹ್ಲಿ ತಂಡದಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಆಟಗಾರರಲ್ಲೋ ಅಥವಾ ಆಟದ ವೈಖರಿಯಲ್ಲೋ ಎಂಬುದು ಪಂದ್ಯದ ಆರಂಭದಲ್ಲಿ ಗೊತ್ತಾಗುವುದು.

Related