ಭಾರತಕ್ಕೆ ವಿಶ್ವಸಂಸ್ಥೆ ಹೇಳಿದ್ದೇನು?

ಭಾರತಕ್ಕೆ ವಿಶ್ವಸಂಸ್ಥೆ ಹೇಳಿದ್ದೇನು?

ವಿಶ್ವಸಂಸ್ಥೆ: ಅಲಿಪ್ತ ರಾಷ್ಟ್ರಗಳ ಒಕ್ಕೂಟ, ಕಾಮನ್‍ವೆಲ್ತ್ ಸೇರಿದಂತೆ ಹಲವು ಸಂಘಟನೆಗಳ ವಿಚಾರದಲ್ಲಿ ಭಾರತ ಒಂದು ಜವಾಬ್ದಾರಿಯುತ ರಾಷ್ಟ್ರ ಎನಿಸಿಕೊಂಡಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಂಭೆಯ ಅಧ್ಯಕ್ಷ ಮೊಹಮ್ಮದ್ ಬಂಧೆ ಹೇಳಿದ್ದಾರೆ.

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯನಾಗುವ ಮೂಲಕ ತಮ್ಮ ರಾಷ್ಟ್ರವಷ್ಟೇ ಅಲ್ಲದೇ ಇನ್ನಿತರ ರಾಷ್ಟ್ರಗಳ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಭಾರತ ಯುಎನ್‍ಒ ನ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ಸ್ಥಾನಕ್ಕೆ ಕಳೆದ ತಿಂಗಳು ಆಯ್ಕೆಯಾಗಿದೆ. 2021 ರ ಜನವರಿಯಿಂದ ಅವಧಿ ಆರಂಭವಾಗಲಿದ್ದು, ಎರಡು ವರ್ಷಗಳ ಕಾಲ ಅವಧಿ ಮುಂದುವರೆಯಲಿದೆ.

Related