ಹಾರೋಹಳ್ಳಿ: ಸರಕಾರಿ ಬಹುತೇಕ ಕಚೇರಿಗಳಲ್ಲಿ ಮಧ್ಯವರ್ತಿಗದ್ದೇ ಕಾರು ಬಾರಾಗಿದ್ದು ಅಧಿಕಾರಿಗಳೇ ಅವರನ್ನು ನೇಮಿಸಿಕೊಳ್ಳುವ ಕೆಲಸ ಮಾಡುತ್ತಿದ್ದೀರಿ ಕೂಡಲೇ ಈ ಪ್ರವೃತ್ತಿಯನ್ನು ಕೈಬಿಡಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್.ಪಿ ಸ್ನೇಹಾ ಎಚ್ಚರಿಸಿದರು.
ಹಾರೋಹಳ್ಳಿಯ ತಾಲೂಕು ಕಚೇರಿ ಎದುರು ನಡೆದ ಲೋಕಾಯುಕ್ತ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ದಾಳಿ ವೇಳೆ ಮಧ್ಯವರ್ತಿಗಳಿಗೆ ಅಧಿಕಾರಿಗಳೇ ಅಧಿಕಾರಿಗಳೇ ದಾಖಲೆಗಳನ್ನು ನೀಡುತ್ತಿದ್ದೀರಿ ನಿಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರಕಾರಿ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಲಿದ್ದೇವೆ. ಕಾನೂನಾತ್ಮಕವಾಗಿ ಸಂಪಾದನೆಗಿಂತ ಆದಾಯ ಹೆಚ್ಚಿದ್ದರೆ ಟ್ರ್ಯಾಪ್ ಮಾಡಲಾಗುವುದು. ದುರ್ನಡತೆ ಇದ್ದರೆ ವರದಿ ನೀಡಲಾಗುವುದು. ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟರೆ. ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತದೆ. ಎಲ್ಲಾ ಕಚೇರಿಗಳಲ್ಲಿ ಲೋಕಾಯುಕ್ತ ಬೋರ್ಡ್ ಕಡ್ಡಾಯವಾಗಿ ಇರಬೇಕು. ನಾವು ಸಾರ್ವಜನಿಕರ ಕೆಲಸ ಮಾಡೋದಕ್ಕೆ ಇರೋದು ಅದನ್ನು ಅಚ್ಚುಕಟ್ಟಾಗಿ ಮಾಡಬೇಕು. ಆ ಕಾರ್ಯಕರ್ತ ಈ ಕಾರ್ಯಕರ್ತ ಎಂದು ಬೆದರಿಸಿದರೆ ಮೊದಲು ದೂರು ನೀಡಿ ಅಲ್ಲದೇ ಇತ್ತೀಚೆಗೆ ಲೋಕಾಯುಕ್ತ ಪೊಲೀಸರ ಹೆಸರಲ್ಲೂ ವಂಚನೆಗಳು ನಡೆಯುತ್ತಿವೆ ಎಚ್ಚರಿಕೆಯಿಂದ ಇರಬೇಕು ಎಂದರು. ಇದನ್ನೂ ಓದಿ: ವೈಭವದ ‘ರನ್ನರಥ’ಕ್ಕೆ ಚಾಲನೆ
ಇದೇ ವೇಳೆ ತಹಸೀಲ್ದಾರ್ ಸಿ.ಆರ್. ಶಿವಕುಮಾರ್ ಮಾತನಾಡಿ, ನಮ್ಮ ಹಂತದಲ್ಲೇ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಜನರನ್ನು ಅಲೆದಾಡಿಸುವುದನ್ನು ತಪ್ಪಿಸಬೇಕು. ಜನರಿಂದ ಬಂದ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗಬೇಕು. ಈ ರೀತಿಯ ಜನಸ್ಪಂದನ ಸಭೆಯು ಆಗಾಗ್ಗೆ ನಡೆಯುತ್ತಿರಬೇಕು ಎಂದರು.
