ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿ.ವಿ. ಸಿಂಧುಗೆ ‘ಚಿನ್ನ’

  • In Sports
  • August 8, 2022
  • 286 Views
ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿ.ವಿ. ಸಿಂಧುಗೆ ‘ಚಿನ್ನ’

ದೆಹಲಿ ಆ08: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದ್ದು, ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಇಂದು ಪಿ.ವಿ. ಸಿಂಧು ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪಿ.ವಿ. ಸಿಂಧು ಅವರು ಇಂದು ನಡೆದ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಶೆಲ್ ಅವರನ್ನು ಪರಾಭವಗೊಳಿಸಿ ಚಿನ್ನದ ಪದಕ ಗಳಿಸಿದ್ದಾರೆ.

ಒಲಂಪಿಕ್ ನಲ್ಲಿ ಎರಡು ಬಾರಿ ಕಂಚಿನ ಪದಕ ಗಳಿಸಿರುವ ಪಿ.ವಿ. ಸಿಂಧು ಅವರು ಇಂದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕಿಯನ್ನು ಬೆಳಗಿಸಿದ್ದಾರೆ.

 

Related