ಇಳಕಲ್ ನಗರ ಸಂಪೂರ್ಣ ಸ್ಥಬ್ದ

ಇಳಕಲ್ ನಗರ ಸಂಪೂರ್ಣ ಸ್ಥಬ್ದ

ಇಳಕಲ್, ಮಾ. 23: ಕೊರೊನಾ ಸೊಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೊದಿಯವರು ಕರೆ ನೀಡಿರುವ ಜನತಾ ಕರ್ಪ್ಯೂಗೆ  ಇಳಕಲ್ ನಗರದ ಜನತೆಯಿಂದ ಸಂಪೂರರ್ಣ ಬೆಂಬಲ ವ್ಯಕ್ತವಾಗಿದೆ.

ವಿಶ್ವದ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟ  ಸಾರ್ವಜನಿಕರು ಮನೆಯಿಂದ ಹೊರಬರದೆ ಜನತಾ ಕರ್ಪ್ಯೂಗೆ   ಬೆಂಬಲ ಸೂಚಿಸಿದ್ದಾರೆ.

ಇಳಕಲ್ ನಗರದ ಪ್ರಮುಖ ರಸ್ತೆಗಳು ಅಂಗಡಿ ಮುಗ್ಗಟ್ಟುಗಳು ಬಂದ ಆದ ಹಿನ್ನಲೆಯಲ್ಲಿ ಇಳಕಲ್ ನಗರ ಸಂಪೂರ್ಣ ಸ್ಥಬ್ದವಾಗಿದೆ.

ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ  ನಗರದ ಕಂಠಿ ವ್ರುತ್ತ, ಗಾಂಧಿ ಚೌಕ, ತರಕಾರಿ ಮಾರುಕಟ್ಟೆ, ಬಸವೇಶ್ವರ ವ್ರುತ್ತ, ಗೊರಬಾಳ ನಾಕಾ ಸೇರಿದಂತೆ ಚಿತ್ರಮಂದಿರ, ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿರುವದರ ಜೊತೆಗೆ ಇಳಕಲ್ ಬಸ್ ನಿಲ್ದಾಣ ಪ್ರಯಾಣಿಕರು ಹಾಗು ಬಸ್ಸುಗಳಿಲ್ಲದೆ ಬಿಕೋ ಎನ್ನುತ್ತಿತ್ತು. ರಸ್ತೆಗಳುಜನ ಸಂಚಾರ ಇಲ್ಲದೆ ಖಾಲಿ ಖಾಲಿ.  ಮನೆಯಲ್ಲಿದ್ದುಕೊಂಡು ಕಾಲ ಕಳೆಯಲಾಗದೆ ಹೊರಗೆ ಹೇಗಿದೆ ಎಂದು ನೋಡಲು ಬಂದ ಸಾರ್ವಜನಿಕರನ್ನು ಪೊಲೀಸರು  ಮನೆಗೆ ಮರಳುವಂತೆ ಸೂಚಿಸುತ್ತಿರುವದು ಸಾಮಾನ್ಯವಾಗಿತ್ತು.

ಅತ್ಯವಶ್ಯಕವಾಗಿರುವ ಆಸ್ಪತ್ರೆ, ಔಷಧ ಅಂಗಡಿಗಳನ್ನು ಹೊರತುಪಡಿಸಿದರೆ ಜನಸಂಚಾರ ವಿರಳವಾಗಿದ್ದು, ಬಂದ್ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಹಾಗು ಹೊಂಗಾರವಡ ಸಿಬ್ಬಂಧಿಗಳು ಕುಡಿಯಲು ಸಹ ನೀರು ಸಿಗದೆ ಪರದಾಡುತ್ತಿದ್ದದ್ದು,  ತುರ್ತು ಸೇವೆ ನೀಡಲೆಂದು ಹಲವು ಕಡೆಗಳಲ್ಲಿ  ಆಟೊ ಚಾಲಕರು ತಮ್ಮ ಆಟೊದೊಂದಿಗೆ ಕಾದು ಕುಳಿತದ್ದು ಕಂಡುಬಂತು.

ಒಟ್ಟಾರೆ ಜನತಾ ಕರ್ಪ್ಯೂ ಇಳಕಲ್ ನಗರದಲ್ಲಿ ಸಂಪೂರ್ಣ ಯಸಸ್ವಿಯಾಗಿದೆ.

Related