ಕಂದಾಯ ನೌಕರರ ಮೇಲೆ ಹಲ್ಯೆ ಖಂಡನೀಯ

ಕಂದಾಯ ನೌಕರರ ಮೇಲೆ ಹಲ್ಯೆ ಖಂಡನೀಯ

ದೇವದುರ್ಗ : ಬಳ್ಳಾರಿ ಜಿಲ್ಲೆಯ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆ ಕಾರ್ಯಚರಣೆ ತಪಾಸಣೆಗೆ ಒಳಪಡಿ ಟ್ರಾಕ್ಟರ್ ಹಿಡಿದು ನಿಲ್ಲಿಸಿದಾಗ ಉದ್ರಿಕ್ತ ಜನರ ಗುಂಪು ಪ್ರಭಾರಿ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಸೇರಿದಂತೆ ಗ್ರಾಮ ಲೆಕ್ಕಿಗರ ಮೇಲೆ ಮಾರಣಾಂತಿಕ ಹಲ್ಯೆ ಮಾಡಿರುವವರನ್ನು ಕೂಡಲೇ ಬಂಧನ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಘಟನೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಘಟಕ ಬಲವಾಗಿ ಖಂಡಿಸುತ್ತದೆ ಎಂದು ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಇವರಿಗೆ ಬರೆದಿರುವ ಮನವಿ ಪತ್ರ ತಹಶೀಲ್ದಾರರು ಅವರಿಗೆ ಸಲ್ಲಿಸಿದರು.

ಪೋಲಿಸ್ ಠಾಣೆಯಲ್ಲಿ ಡಿ.1ರಂದು ದೂರು ದಾಖಲಿಸಿದರೂ ಪುನಃ ತೋಳಮಾಮಿಡಿ ಹಾಗೂ ಬಳ್ಳಾರಿ ಮಿಲ್ಲರ ಪೇಟೆ ಗ್ರಾಮದ ಸುಮಾರು ಇಪ್ಪತ್ತು ಜನರು ಸೇರಿದ ಗುಂಪು ಏಕಾಏಕಿ ಪ್ರಭಾರಿ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಮನೆಗೆ ನುಗ್ಗಿ ಹತ್ಯೆಗೆ ಪ್ರಯತ್ನಿಸಿದಲ್ಲದೆ ಅವರ ಕುಟುಂಬಸ್ಥರ ಮೇಲೆಯೂ ಹಲ್ಯೆ ಮಾಡಿ ತೀವ್ರ ಗಾಯಗಳು ಮಾಡಿರುವ ಘಟನೆಯು ನೌಕರರ ಕುಟುಂಬಸ್ಥರಲ್ಲಿ ಭಯದ ಭೀತಿಯನ್ನು ಉಂಟುಮಾಡಿದೆ.

ಹಾಗಾಗಿ ಸರ್ಕಾರಿ ನೌಕರರ ಮೇಲೆ ಪ್ರತಿನಿತ್ಯವೂ ಒಂದಿಲ್ಲೊಂದು ಘಟನೆಗಳು ನಡೆಯುತ್ತಿವೆ ನೌಕರರ ಮೇಲೆ ಪ್ರಭಾವ ಹಲ್ಯೆ ದೌರ್ಜನ್ಯ ಎಸಗುವ ಸಮಾಜ ಘಾತಕ ಶಕ್ತಿಗಳನ್ನು ಮಟ್ಟ ಹಾಕುವುದಕ್ಕೆ ಮುಂದಾಬೇಕು ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಂಘವು ಮನವಿ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತ್ರಾಯ ನಾಯಕ ಶಾಖೆ, ರಾಜ್ಯ ಪರಿಷತ್ತು ಸದಸ್ಯ ಶಿವಲಿಂಗಯ್ಯ, ಕೋಶಾಧ್ಯಕ್ಷ ಬಸವರಾಜ, ಪ್ರಧಾನ  ಕಾರ್ಯದರ್ಶಿ ಭೀಮರಾಯ ಮೇಟಿ, ಭೀಮನಗೌಡ, ಗರುಡುವಾಹನ, ರವಿಕುಮಾರ ನಾಯಕ, ಮಹಾದೇವಪ್ಪಗೌಡ, ರಾಘವೇಂದ್ರ ಪಾಟೀಲ್, ಗೋವಿಂದರಾಯ ಲಕ್ಷಣರಾವ್, ಬಸವರಾಜ, ಪ್ರಕಾಶಗೌಡ, ವೆಂಜಟರಡ್ಡಿ ಪಾಟೀಲ್, ಉಮೇಶ್, ಗೌರಮ್ಮ ವಾರದ, ಕವಿತಾ, ಮತ್ತಿತರರು ನೌಕರರು ಇನ್ನಿತರರಿದ್ದರು.

Related