ಬೆಂಗಳೂರು: ಮಾಧ್ಯಮ, ಕಲೆ, ವಿಜ್ಞಾನ, ಶಿಕ್ಷಣ, ಸಮಾಜ ಸೇವೆ ಹಾಗೂ ಕ್ರೀಡೆ ಹಾಗೂ ಚಿತ್ರರಂಗ ಸೇರಿದಂತೆ ನಾನಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲು ದುಬೈನ ಫ್ಯೂಚರ್ ಆಫ್ ಮ್ಯೂಸಿಯಂನಲ್ಲಿ ಏ. 12 ರಂದು ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಆಯೋಜಿಸಲಾಗಿರುವ ಕನ್ನಡ ಉತ್ಸವ 2025ರ ಗ್ಲೋಬಲ್ ಐಕಾನ್ ಅಂತಾರಾಷ್ಟ್ರೀಯ ಮೀಡಿಯಾ ಅವಾರ್ಡ್-2025ರ ಸ್ಮರಣಿಕೆಯನ್ನು ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಛರ‍್ಮೆನ್ ಡಾ. ರಾಯ್ ಸಿ.ಜೆ, ಖ್ಯಾತ ನಾಯಕಿ ನಟಿ ಮೇಘನಾರಾಜ್, ಅನುಷಾ ರೈ, ನಿರ್ದೇಶಕ ಹರಿಸಂತೋಷ್ ಸೇರಿದಂತೆ ಇತರರು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಡಾ. ರಾಯ್ ಸಿ.ಜೆ. ರವರು, ಕೆಎಂಜೆಯು ಅತ್ಯದ್ಭುತ ಕರ್ಯವನ್ನು ಹಮ್ಮಿಕೊಂಡಿದ್ದು, ದುಬೈನಲ್ಲಿರುವ ಕನ್ನಡಿಗರನ್ನು ಈ ವೇದಿಕೆ ಮೂಲಕ ಭೇಟಿ ಮಾಡುವ ಸುಸಂದರ್ಭ ಒದಗಿಬಂದಿದೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಇದೇ ವೇಳೆ ಶುಭ ಹಾರೈಸಿದರು. ಇದನ್ನೂ ಓದಿ: ಸರ್ಕಾರಕ್ಕಿಂತ ಪಕ್ಷ ದೊಡ್ಡದು: ಡಿಕೆಶಿ
ಬೆಂಗಳೂರಿನಲ್ಲಿರುವ ಗೋಲ್ಡ್ ಪಿಂಚ್ ಹೋಟೆಲ್‌ನಲ್ಲಿ ಶುಕ್ರವಾರ ಮಾ. 28 ರಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್‌ನ ಅಧ್ಯಕ್ಷರಾದ ಚಂದ್ರಶೇಖರ್ ರವರು, ನಮ್ಮ ಸಂಸ್ಥೆ ಕಳೆದ 10 ವರ್ಷಗಳಿಂದ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವ ಕರ್ಯವನ್ನು ಮಾಡುತ್ತಾ ಬಂದಿದೆ. ಈ ಹಿನ್ನೆಲೆ ಪ್ರಥಮ ಬಾರಿಗೆ ಸಾಗರದಾಜೆಗಿನ ದೇಶಗಳಲ್ಲಿ ಇರುವ ಸಾಧಕರನ್ನೂ ಗುರುತಿಸಿ ಅವರಿಗೆ ಗ್ಲೋಬಲ್ ಐಕಾನ್ ಎಂಬ ಅಂತಾರಾಷ್ಟ್ರೀಯ ಮೀಡಿಯಾ ಅವಾರ್ಡ್ ನೀಡಲು ತೀರ್ಮಾನಿಸಲಾಗಿದೆ. ನಮ್ಮ ದೇಶ ಮತ್ತು ರಾಜ್ಯದೊಳಗಿನ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ ಮಾದರಿ ಸಾಧಕರನ್ನು ವಿದೇಶಗಳ ವಿಶ್ವ ಮಟ್ಟದ ವೇದಿಕೆಗಳಲ್ಲಿ ಗ್ಲೋಬಲ್ ಐಕಾನ್ ಎಂಬ ಅಂತಾರಾಷ್ಟ್ರೀಯ ಮೀಡಿಯಾ ಅವಾರ್ಡ್ ನೀಡಿ ವಿಜೃಂಭವಿಸುವಂತೆ ಮಾಡಲಾಗುತ್ತಿದೆ ಎಂದರು.
ಇದೇ ಏಪ್ರಿಲ್ 12-2025 ರಂದು ದುಬೈನಲ್ಲಿರುವ ಮ್ಯೂಸಿಯಂ ಆಫ್ ದಿ ಪ್ಯೂಚರ್ ನಲ್ಲಿ ದುಬೈನ ವಿವಿಧ ಕನ್ನಡ ಸಂಘಟನೆಗಳ ಜತೆಗೂಡಿ ಸಾಧಕರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಿದೆ.
ಕಾರ್ಯಕ್ರಮದಲ್ಲಿ ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥರಾದ ಡಾ.ರಾಯ್ ಸಿ.ಜೆ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಐದಕ್ಕೂ ಹೆಚ್ಚು ಶಾಸಕರು ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅನೇಕ ಕೈಗಾರಿಕೆಗಳ ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಸಲಿದ್ದಾರೆ.
ಇದಲ್ಲದೆ ಖ್ಯಾತ ನಟಿ ಪ್ರೇಮ, ನಟಿಯರಾದ ಧನ್ಯ ರಾಮ್ ಕುಮಾರ್, ನಟ ಶಶಿಕುಮಾರ್, ಮೇಘನಾ ರಾಜ್, ಸಂಜನಾ ದಾಸ್ ಮತ್ತು ಅನುಷಾ ರೈ ಆಗಮಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ಮೂರು ದಿನಗಳ ಕಾಲ ದುಬೈನಲ್ಲಿ ವಾಸ್ತವ್ಯ, ಪ್ರಯಾಣ ಮತ್ತು ಪ್ರವಾಸಕ್ಕೂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಇದೇ ವೇಳೆ ನುಡಿದರು.
ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಅನುಷಾ ರೈ, ಕೋ ಆರ್ಡಿನೇಟರ್ ಶ್ರೀನಿವಾಸ್, ನಿರ್ಮಾಪಕ ತೇಜು, ನಿರ್ದೇಶಕ ಹರಿ ಸಂತೋಷ್, ನಿರೂಪಕಿ ಜಾನಕಿ, ಮಜಾ ಭಾರತ ಸೀತಾರಾಮು, ಗಾಯಕಿಯರಾದ ಚಿನ್ಮಯಿ ಮತ್ತು ಮಾನಸ ಇನ್ನಿತರರು ಭಾಗವಹಿಸಿದ್ದರು.
