Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಗಂಗಮತ ಸಮಾಜ ಸದಾ ಒಗ್ಗಟ್ಟಿನಿಂದಿರಬೇಕು
  • State

ಗಂಗಮತ ಸಮಾಜ ಸದಾ ಒಗ್ಗಟ್ಟಿನಿಂದಿರಬೇಕು

admin January 21, 2025
Spread the love

ಶಹಾಪುರ: ಗಂಗಮತ ಸಮಾಜದ ಪ್ರತಿಯೊಬ್ಬರೂ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಮತ್ತು ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ನಾವು ಎಲ್ಲರೂ ಎಂಥದ್ದೆ ಸಮಸ್ಯೆ ಬಂದರೂ ಒಂದಾಗಿರಬೇಕು ಎಂದು ಸಮಾಜದ ಮುಖಂಡ ಮಹಾದೇವಪ್ಪ ಸಾಲಿಮನಿ ಹೇಳಿದರು.

ನಗರದ ನಗರಸಭೆ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಸಮಾಜದಲ್ಲಿ ಒಗ್ಗಟ್ಟು ಇರಬೇಕು. ಯುವ ಸಮುದಾಯವು ದೊಡ್ಡ ಸ್ಥಾನಮಾನಗಳನ್ನು ಪಡೆಯಬೇಕು. ಉನ್ನತ ಹುದ್ದೆಗೇರಲು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದರು.

ತಹಸೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿ ನ್ಯಾಯನಿಷ್ಠುರಿ ನಿಜಶರಣ ಅಂಬಿಗರ ಚೌಡಯ್ಯ. ಅಂಬಿಗ ವೃತ್ತಿ ಮಾಡುತ್ತಿದ್ದರೂ ತನ್ನ ಜ್ಞಾನ ದೀವಿಗೆಯಿಂದ ಜಗತ್ತೀಗೆ ದಿಗ್ದರ್ಶನ ಮಾಡಿದ್ದಾರೆ. ಚೌಡಯ್ಯ ಅವರಿಗೆ ತಮ್ಮ ವೃತ್ತಿ ಬಗ್ಗೆ ಬಹಳ ಗೌರವಿತ್ತು. ಅದರಂತೆ ನಾವು ಸಹ ಕೀಳಿರಿಮೆ ಬಿಟ್ಟು ವೃತ್ತಿಯಲ್ಲಿ ದೇವರನ್ನು ಕಾಣಬೇಕು. ಜೀವನದಲ್ಲಿ ಹುಟ್ಟು ಸಾವು ಖಚಿತ ಇದರ ನಡುವೆ ಜೀವನದಲ್ಲಿ ಹೇಗೆ ಬಾಳಬೇಕು ಎಂಬುವುದನ್ನು ತೋರಿಸಿ ಕೊಟ್ಟಿದ್ದು ಅದರಂತೆ ಮುನ್ನಡೆಯಬೇಕು ಎಂದರು. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಿದ ಶ್ರೀ ವಿನಯ ಗುರೂಜಿ

ಸಂಶೋಧಕರು ಹಾಗೂ ಸಹಾಯಕ ಖಜನಾಧೀಕಾರಿ ಡಾ.ಎಮ್.ಎಸ್ ಶಿರವಾಳ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವೈಚಾರಿಕ ಪ್ರಜ್ಞೆಯಿಂದ ಜನ ಸಮೂಹದ ಮೌಢ್ಯವನ್ನು ಹೊಡೆದೋಡಿಸಿದ ಮಹನೀಯರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರು. ಸಾಮಾಜಿಕ ವಿಡಂಬನೆ ಜೊತೆಗೆ ಸಾತ್ವಿಕ ಚಿಂತನೆಗಳನ್ನು ವ್ಯಕ್ತಮಾಡುವ ಸಂದೇಶಗಳನ್ನು ಹೊಂದಿದ್ದವು. ಕೋಲಿ ಸಮಾಜದಲ್ಲಿ ಜನಿಸಿದ ಅನೇಕ ಮಹಾನ್ ನಾಯಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಚೌಡಯ್ಯ ಅವರ ಕುರಿತು ಅರ್ಥಗರ್ಭೀತವಾಗಿ ಮಾತನಾಡಿದರು. ಮಕ್ಕಳ ತಜ್ಞೆ ಡಾ.ಶ್ರೀದೇವಿ ಗಂಗನಾಳ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸಚಿವರಿಂದ ಭಾವಚಿತ್ರ ಮೆರವಣಿಗೆಗೆ ಚಾಲನೆ

ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪೂಜೆ ಸಲ್ಲಿಸಿ ಗೌರವಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಪ್ರತಿ ವರ್ಷಕ್ಕಿಂತಲೂ ಈ ಭಾರಿ ವಿಶೇಷವಾಗಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆ ಮೆರಗು ನೀಡಿದವು. ವಿವಿಧ ವಾದ್ಯಗಳ ನಾದದೊಂದಿಗೆ ಮೆರವಣಿಗೆ ಭಾಗವಹಿಸಿದ್ದ ಅನೇಕರು ತಾಳಕ್ಕೆ ನೃತ್ಯ ಮಾಡಿದರೆ, ಡಿಜೆ ಸೌಂಡ್‌ಗೆ ಯುವಕರು ಕಿಕ್ಕಿರಿದು ಕುಣಿದರು. ಹಲವರು ಚೌಡಯ್ಯನವರ ವಚನಗಳನ್ನು ಹಾಡಿದರು. ಮೆರವಣಿಗೆ ಜನಮನ ಸೆಳೆಯಿತು.

ಈ ಸಂದರ್ಭದಲ್ಲಿ ಶರಣಪ್ಪ ಸಲಾದಪುರ, ಶರಣು ಗದ್ದುಗೆ, ಸೇರಿದಂತೆ ವಿವಿಧ ಸಮಾಜದ ಮುಖಂಡರು, ಪರಶುರಾಮ ಮುತ್ಯಾ, ನಗರಸಭೆ ಅಧ್ಯಕ್ಷೆ ಮೆಹರೂನ ಬೇಗಂ, ಉಪಾಧ್ಯಕ್ಷೆ ಬೀಮಬಾಯಿ, ಕೋಲಿ ಕಬ್ಬಲಿಗ ಸಮಾಜದ ಹಿರಿಯ ಮುಖಂಡ ಅಯ್ಯಣ್ಣ ಕನ್ಯಾಕೊಳ್ಳೂರ, ತಾಲೂಕ ಅಧ್ಯಕ್ಷ ರಾಯಪ್ಪ ಸಾಲಿಮನಿ, ಇಒ ಬಸವರಾಜ ಶರಬೈ, ಪೌರಾಯುಕ್ತ ರಮೇಶ ಬಡಿಗೇರ, ಮುಖಂಡರಾದ ಸಣ್ಣ ನಿಂಗಣ್ಣ ನಾಯ್ಕೋಡಿ, ಮರೆಪ್ಪ ಪ್ಯಾಟಿ, ಯಲ್ಲಪ್ಪ ನಾಯ್ಕೋಡಿ, ಭೀಮಣ್ಣ ಶಖಾಪುರ, ರಾಮಾಂಜನೇಯ, ರಾಮಣ್ಣ ನಾಯ್ಕೊಡಿ, ಮೌನೇಶ ಹೈಯಾಳಕರ್, ಬಸವರಾಜ ಚೆಂಡು, ವೆಂಕಟೇಶ ಮೂಲಿಮನಿ, ಡಾ.ಷಣ್ಮುಖಪ್ಪ ಗೊಂಗಡಿ, ಮೌನೇಶ ಹಳಿಸಗರ, ವೆಂಕಟೇಶ ಬೋನೇರ, ಅಂಬ್ರೇಶ ಬೈಚಬಾಳ, ದೇವಪ್ಪ ಸುರಪುರಕರ್, ಲಕ್ಷ್ಮಿಕಾಂತ ನಾಯ್ಕೋಡಿ, ರಾಜು ನಾಯ್ಕೋಡಿ, ಯಲ್ಲಪ್ಪ ಮಾಸ್ತರ್ ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.

About the Author

admin

Administrator

Visit Website View All Posts

Spread the love

Post navigation

Previous: ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಿದ ಶ್ರೀ ವಿನಯ ಗುರೂಜಿ
Next: ಕಾಂಗ್ರೆಸ್ ಸಮಾವೇಶಕ್ಕೆ ಆರ್ ಅಶೋಕ್ ವ್ಯಂಗ್ಯ!

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.