ಬೆಂಗಳೂರು: ಬೆಂಗಳೂರಿ ನಗರದಿಂದ ತುಮಕೂರು ನಗರದ ವರೆಗೆ ನಮ್ಮ ಮೆಟ್ರೋ ವ್ಯವಸ್ಥೆ ಆಗಬೇಕು ಎಂಬ ಚರ್ಚೆಯ ಬಗ್ಗೆ ಈಗಾಗಲೇ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಿಳಿಸುವುದರ ಜೊತೆಗೆ ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ವಿ ಸೋಮಣ್ಣ ಅವರ ಜೊತೆ ಕೂಡ ನಾವು ಚರ್ಚಿಸಿದ್ದೇವೆ ಇದಕ್ಕೆ ಅಧಿಕೃತ ಒಪ್ಪಿಗೆ ಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ವ್ಯವಸ್ಥೆ ಬೇಕೆನ್ನುವುದು ನಮ್ಮ ಒತ್ತಾಯವಿದೆ. ಮೆಟ್ರೋ ಮಾಡಿದರೆ ಬೆಂಗಳೂರು ಸಂಚಾರ ಒತ್ತಡ ಕಡಿಮೆಯಾಗುತ್ತದೆ. ಇದನ್ನೂ ಓದಿ: ರೈಲ್ವೆ ಟಿಕೆಟ್ ದರ ಏರಿಕೆಗೆ ಸಿಎಂ ಹೇಳಿದ್ದೇನು?
ಇದರ ವರದಿಯನ್ನು ಈಗಾಗಲೇ ಮಾಡಲಾಗಿದೆ. ಇದಕ್ಕಿನ್ನೂ ಡಿಪಿಆರ್ ಆಗಬೇಕು. ಬಂಡವಾಳ ವಿಚಾರ ಇದೆ, ಕೇಂದ್ರದ ಅನುಮತಿ ಬೇಕು. ಈ ಪ್ರಕ್ರಿಯೆಗಳನ್ನು ಚುರುಕು ಮಾಡಲು ತಿಳಿಸಿದ್ದೇನೆ ಎಂದು ಹೇಳಿದರು.
