ಒಂದೇ ಕುಟುಂಬದ ಸನ್ಯಾಸ ದೀಕ್ಷೆ ಪಡೆದ ಐವರು

ಒಂದೇ ಕುಟುಂಬದ ಸನ್ಯಾಸ ದೀಕ್ಷೆ ಪಡೆದ ಐವರು

ದಾವಣಗೆರೆ : ದಾವಣಗೆರೆ ಬಳಿಯ ಅವರಗೆರೆ ಜೈನ ದೇವಾಲಯದಿಂದ ನಡೆದ ಪಾದಯಾತ್ರೆ ಬಳಿಕ ಒಂದೇ ಕುಟುಂಬದ ಐವರು ಮತ್ತು ಮತ್ತೊಬ್ಬರ ಜೈನ ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಿತು.

ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನರು ಜೈನ ಸನ್ಯಾಸ ದೀಕ್ಷೆಯನ್ನು ಪಡೆದರು. ಸುಮಾರು 10 ಸಾವಿರಕ್ಕೂ ಅಧಿಕ ಜನರು ಸಾಕ್ಷಿಯಾದರು.
ಸನ್ಯಾಸ ದೀಕ್ಷೆ ಪಡೆಯುವವರು ಲೌಕಿಕ ಜೀವನಕ್ಕೆ ವಿದಾಯ ಹೇಳುವ ಸಮಾರಂಭ ಭಾನುವಾರ ರಾತ್ರಿ ನಡೆಯಿತು. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನದಿಂದ ಹಲವಾರು ಜೈನ ಧರ್ಮೀಯರು ಈ ಸಮಾರಂಭಕ್ಕಾಗಿ ಆಗಮಿಸಿದ್ದರು.

ಸನ್ಯಾಸ ದೀಕ್ಷೆ ಸ್ವೀಕಾರಕ್ಕೂ ಮುನ್ನ ಎಲ್ಲರೂ ಉಂಗುರ, ವಸ್ತ್ರಗಳನ್ನು ದಾನ ಮಾಡಿದರು. ಬಳಿಕ ಗುರುಗಳು ಎಲ್ಲರ ತಲೆಯ ಮೇಲೆ ಅಕ್ಕಿ ಹಾಕುವ ಮೂಲಕ ದೀಕ್ಷೆ ನೀಡಿದರು. ಬಳಿಕ ಎಲ್ಲರಿಗೂ ಹೊಸದಾಗಿ ನಾಮಕರಣ ಮಾಡಲಾಯಿತು.

ಸನ್ಯಾಸ ದೀಕ್ಷೆ ಪಡೆದ ಮೇಲೆ ಅಹಿಂಸಾ ವ್ರತ ಪಾಲನೆ ಮಾಡಬೇಕು, ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು, ಯಾವುದೇ ಸ್ಥಿರ, ಚರ ಆಸ್ತಿ ಹೊಂದಬಾರದು, ಬ್ರಹ್ಮಚರ್ಯ ಪಾಲನೆ ಮಾಡಬೇಕು.

ಸನ್ಯಾಸ ದೀಕ್ಷೆ ಕಾರ್ಯಕ್ರಮದಲ್ಲಿ ಆಚಾರ್ಯ ಮೇಘದರ್ಶನ ಸುರೀಜಿ ಮಹಾರಾಜ್, ಆಚಾರ್ಯ ಗಚ್ಛಾಧಿಪತಿ ಉದಯಪ್ರಭಾ ಸುರೀಜಿ ಮಹಾರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Related