ನೇಹಾನೇ ನನ್ನ ಮಗನಿಗೆ ಪ್ರಪೋಸ್ ಮಾಡಿದ್ದಳು ಫಯಾಸ್ ತಾಯಿ

ನೇಹಾನೇ ನನ್ನ ಮಗನಿಗೆ ಪ್ರಪೋಸ್ ಮಾಡಿದ್ದಳು ಫಯಾಸ್ ತಾಯಿ

ಧಾರವಾಡ: ಇಡೀ ಕರ್ನಾಟಕ ಜನತೆಯನ್ನು ಬೆಚ್ಚಿ ಬೆಳಿಸುವ ಕೃತ್ಯ ಹುಬ್ಬಳ್ಳಿ ಕಾಲೇಜಿನಲ್ಲಿ ನಡೆದಿದ್ದು ನೇಹಾ ಎಂಬ ಯುವತಿಯನ್ನು ಫಯಾಜ್ ಎಂಬ ಯುವಕ ಸುಮಾರು 9 ಸಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದ್ದು, ಕೊಲೆಗಿಡಾದ ನೇಹಾನನ್ನು ನಿನ್ನೆ ಅಂತ್ಯಸಂಸ್ಕಾರ ಮಾಡಲಾಗಿದ್ದು ಇನ್ನು ಆರೋಪಿ ಫಯಾಜ್ ನನ್ನು 14 ದಿನಗಳ ಬಂಧನಗಳ ಒಳಪಡಿಸಲಾಗಿದೆ.

ಇನ್ನು ಆರೋಪಿ ಫಯಾಜ್ ಅವರ ತಾಯಿ ಮುಮ್ತಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೊದಲು ಕರ್ನಾಟಕ ಜನತೆಗೆ ಮತ್ತು ನೇಹಾ ತಂದೆ ತಾಯಿಗೆ ಕ್ಷಮೆ ಕೇಳುತ್ತೇನೆಂದು ಫಯಾಜ್ ತಾಯಿ ಹೇಳಿದ್ದಾರೆ.

ನೇಹಾನೇ ನನ್ನ ಮಗನಿಗೆ ಪ್ರೀತಿಯ ಪ್ರಪೋಸ್ ಮಾಡಿದ್ದಳೆಂದು ಮಾಹಿತಿಯನ್ನು ನೀಡಿದ್ದಾರೆ. ನೇಹಾ ಮತ್ತು ನನ್ನ ಮಗ ಫಯಾಜ್ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದರು, ನನ್ನ ಮಗ ಮೊದಲು ಯಾವ ಹುಡುಗಿಯರ ಸಾವಸಕ್ಕೂ ಹೋಗುತ್ತಿರಲಿಲ್ಲ.

ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿರುವ ಸಂದರ್ಭದಲ್ಲಿ ನೇಹಾನೆ ಬಂದು ನನ್ನ ಮಗನ ಫೋನ್ ನಂಬರ್ ಕೇಳಿ ಆಮೇಲೆ ನೇಹಾನೇ ಅವನಿಗೆ ಪ್ರಪೋಸ್ ಮಾಡಿದ್ದಾರೆ ಎಂದು ಆರೋಪಿ ಫಯಾಜ್ ತಾಯಿ ಹೇಳಿದ್ದಾರೆ.

ಜಿಮ್ ಮಾಡೋದ್ರಲ್ಲಿ ನನ್ನ ಮಗನಿಗೆ ಅಲ್ಲಲ್ಲಿ ಕೆಲವೊಂದು ಅವಾರ್ಡ್ ಗಳು ಬಂದಿದ್ದರಿಂದ ಎಲ್ಲ ಹುಡುಗಿಯರು ನನ್ನ ಫ್ಯಾನ್ಸ್ ಆಗಿದ್ದಾರೆ ಎಂದು ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದ.

ಜಿಮ್ ಕಾಂಪಿಟೇಶನ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ ಮೇಲೆ ಎಷ್ಟೋ ಅಭಿಮಾನಿಗಳು ಈಗ ನನ್ನ ಹತ್ತಿರ ಬಂದು ನನ್ನ ನಂಬರ್ ಕೇಳಿ ಪಡೆಯುತ್ತಿದ್ದಾರೆ ಎಂದು ನನ್ನ ಮಗ ನನ್ನ ಹತ್ತಿರ ಹೇಳುತ್ತಿದ್ದ.

ಅದರಲ್ಲಿ ನೇಹಾ ಎಂಬ ಹುಡುಗಿ ನನ್ನನ್ನು ಬಹಳ ಹಚ್ಚಿಕೊಂಡು ಪ್ರೀತಿ ಮಾಡುತ್ತೇನೆ ಎಂದು ಪ್ರಪೋಸ್ ಮಾಡಿದ್ದಾಳೆ ಎಂದು ಕಳೆದ ವರ್ಷವೇ ನನ್ನ ಹತ್ತಿರ ನನ್ನ ಮಗ ಫಯಾಜ್ ಹೇಳಿದ ಎಂದು ಆರೋಪಿ ಫಯಾಜ್ ತಾಯಿ ಮಾಧ್ಯಮ ಪ್ರತಿನಿಧಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇನ್ನು ಫಯಾಸ್ ಗೆ ನಾನು ಹೇಳಿದ್ದು, ಇನ್ನು ಕಲಿತಾ ಇದ್ದೀಯ ಲವ್ವು, ಪ್ರೀತಿ, ಪ್ರೇಮ ಬೇಡ ಎಂದು ನಾನು ಬುದ್ಧಿ ಹೇಳಿ ಕಳಿಸಿದ್ದೆ ಎಂದರು.

ನನ್ನ ಮಗ ತುಂಬಾ ಬುದ್ಧಿವಂತ ಇದ್ದ ಹಾಗಾಗಿ ನಾನು ನನ್ನ ಮಗನನ್ನು ಒಂದು ಉನ್ನತ ಮಟ್ಟಕ್ಕೆ ಏರಿಸುವ ಗುರಿಯನ್ನು ಹೊಂದಿದ್ದೆ ಆದರೆ ವಿಧಿ ಆಟ ನೇಹಾ ಮತ್ತು ಫಯಾಜ್ ಬದುಕಿನಲ್ಲಿ ಆಟ ಆಡಿದೆ ಎಂದುಕಣ್ಣಿರು ಹಾಕಿದ್ದಾರೆ.

Related