ಮಂಡ್ಯ: ಟ್ರಾಫಿಕ್ ಪೊಲೀಸರ ಯಡವಟ್ಟಿನಿಂದಾಗಿ ಒಂದು ಚಿಕ್ಕ ಮುದ್ದು ಕಂದಮ್ಮ ಪ್ರಾಣ ಕಳೆದುಕೊಂಡಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸಚಿವ ಚೆಲುವರಾಯ ಸ್ವಾಮಿ ಅವರು ಮಗು ಕಳೆದುಕೊಂಡ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಹೌದು, ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಗು ಬಲಿಯಾಗಿತ್ತು. ವಾಣಿ-ಅಶೋಕ್ ಪುತ್ರಿ ಹೃತೀಕ್ಷಾಗೆ ನಾಯಿ ಕಚ್ಚಿತ್ತು. ಹೀಗಾಗಿ ಆ ಕೂಡಲೇ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.
ಇದೇ ವೇಳೆ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗೆಂದು ಬೈಕ್ ಅಡ್ಡಗಟ್ಟಿದ್ದಾರೆ. ಇದೇ ವೇಳೆ ಬೈಕ್ನಲ್ಲಿದ್ದ ತಂದೆ, ತಾಯಿ ಹಾಗೂ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಹೃತೀಕ್ಷಾಳ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಜೀವಬಿಟ್ಟಿದೆ. ಇದನ್ನೂ ಓದಿ: ಜಾತಿ ಸಮೀಕ್ಷೆ; ಸಮುದಾಯದ ಅಳಿವು ಉಳಿವಿನ ಪ್ರಶ್ನೆ: ಕೆಹೆಚ್. ಮುನಿಯಪ್ಪ
ಇದೀಗ ಮಗಳನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದ ಪೋಷಕರನ್ನು ಭೇಟಿಯಾಗಲು ಖುದ್ದು ಸಚಿವ ಚಲುವರಾಯಸ್ವಾಮಿ ಬಂದಿದ್ದರು. ಈ ವೇಳೆ ತಂದೆ ಅಶೋಕ್ ಮೊಬೈಲ್‌ನಲ್ಲಿ ಸಚಿವ ಚಲುವರಾಯಸ್ವಾಮಿಗೆ ಮಗಳ ಫೋಟೋ ತೋರಿಸಿದ್ದಾರೆ. ನೋಡಿ ಸರ್ ನನ್ನ ಮಗಳು ಹೇಗ್ ಇದ್ದಳು. ನನಗೆ ಅನ್ನವನ್ನು ತಿನ್ನಿಸುತ್ತಿದ್ದಳು. ಪಪ್ಪಾ ನನಗೆ ನೀನೇ ಸ್ನಾನ ಮಾಡಿಸು ಅಂತಾ ಹೇಳುತ್ತಿದ್ದಳು. ಈಗ ನಾನ್ ಏನು ಮಾಡೋದು ಸರ್ ಅಂತ ಕಣ್ಣೀರು ಹಾಕಿದ್ದಾರೆ.
ಟ್ರಾಫಿಕ್ ಪೊಲೀಸರ ಯಡವಟ್ಟಿನಿಂದ ನಾನು ಇಂದು ನನ್ನ ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದೇನೆ ಎಂದು ಚೆಲುವರಾಯಸ್ವಾಮಿ ಅವರ ಮುಂದೆ ಪರಿತಪಿಸಿದ್ದಾರೆ.
