ಏಯ್‌ ಕೊಹ್ಲಿ ಚೌಕ ಮಾರ್

ಏಯ್‌ ಕೊಹ್ಲಿ ಚೌಕ ಮಾರ್

ಮಹಾರಾಷ್ಟ್ರ ಏ. 18 : ಲೌಕ್‌ಡೌನ್‌  ಹಿನ್ನಲೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಅನುಷ್ಕಾ ಅವರು ವಿರಾಟ್​ ಕೊಹ್ಲಿ ಅಭಿಮಾನಿಯಾಗಿದ್ದು, ಏಯ್‌ ಕೊಹ್ಲಿ ಬೌಂಡರಿ ಹೊಡಿ ಎಂದು ಗಟ್ಟಿಧ್ವನಿಯಲ್ಲಿ ಹೇಳುತ್ತಿದ್ದಾರೆ. ಬಾಲಿವುಡ್​​ ನಟಿ, ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಧರ್ಮಪತ್ನಿ ಅನುಷ್ಕಾ ಶರ್ಮಾ ಅವರು ‘ಏಯ್‌ ಕೊಹ್ಲಿ, ಕೊಹ್ಲಿ ಚೌಕಾ ಮಾರ್‌’ ( ಏಯ್‌ ಕೊಹ್ಲಿ…ಕೊಹ್ಲಿ… ಬೌಂಡರಿ ಹೊಡಿ) ಎಂದು ಹೇಳುವ ಮೂಲಕ ತನ್ನ ಪತಿಗೆ ಅಭಿಮಾನಿಗಳ ಕೂಗನ್ನು ನೆನಪಿಸುವಂತೆ ಮಾಡಿದ್ದಾರೆ.

ಇಂಡಿಯಾದಲ್ಲಿ ಲೌಕ್‌ಡೌನ್‌ ಪರಿಣಾಮ ಮನೆಯಲ್ಲೇ ಕಾಲ ಕಳೆಯುತ್ತಿರುವ ಈ ದಂಪತಿ ಅಭಿಮಾನಿಗಳಿಗೆ ಕೊರೊನಾ ವೈರಸ್‌ ಕುರಿತಾದ ಜಾಗೃತಿ ವಿಡಿಯೋಗಳನ್ನು ಮಾಡಿದ್ದರು. ಇದೀಗ ಮನರಂಜನೆಯ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಅದು ಪಕ್ಕಾ ಕೊಹ್ಲಿ ಅಭಿಮಾನಿಗಳ ಶೈಲಿಯಲ್ಲಿ ಹೇಳಿರುವುದು ಹೆಚ್ಚು ಆಕರ್ಷಕವಾಗಿದೆ ಇದಕ್ಕೆ ಕೊಹ್ಲಿ ತಮ್ಮ ಕಣ್ಣುಗಳ ಮೂಲಕ ಸನ್ನೆ ಮಾಡಿ ಉತ್ತರ ಕೊಡುವುದು ಅವರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ಈ ವಿಡಿಯೋ ಅಪ್‌ಲೋಡ್‌ ಆದ ಕೆಲವೇ ಗಂಟೆಯಲ್ಲಿ 90 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ವೀಕ್ಷಣೆ ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್‌ ಆಗಿದೆ. ಲಾಕ್‌ಡೌನ್‌ ಪರಿಣಾಮ ಮದುವೆಯಾದ ಬಳಿಕ ಅನುಷ್ಕಾ ಮತ್ತು ಕೊಹ್ಲಿ ಇಷ್ಟುದಿನಗಳ ಕಾಲ ಒಟ್ಟಿಗೆ ಇರುವುದು ಇದೇ ಮೊದಲು.

 

Related