Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬಿಜೆಪಿ ಎಜೆಂಟ್ ಆಗಿ ಕೆಲಸ‌ ಮಾಡಬೇಡಿ, ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ
  • Bangalore
  • Politics
  • State

ಬಿಜೆಪಿ ಎಜೆಂಟ್ ಆಗಿ ಕೆಲಸ‌ ಮಾಡಬೇಡಿ, ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ

admin July 9, 2025 1 minute read
Spread the love

ಬೆಂಗಳೂರು: ರಾಜ್ಯ ಭೋವಿ ಸಮಾಜದ‌‌ ಪ್ರಭಾವಿ ನಾಯಕರು ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ವಿರುದ್ದ‌ ಆದಾರ ರಹಿತ ಸಲ್ಲದ ಆರೋಪ‌ ಮಾಡಿರುವ ನೆಲಮಂಗಲ ಗಾಣಿಗ ಮಠದ ಪೂರ್ಣಾ‌ನಂದ ಪುರಿ ಸ್ವಾಮೀಜಿ ಗಳು ಮಠ ಬಿಟ್ಟು ರಾಜಕೀಯ ಪ್ರವೇಶಿಸಲಿ ಎಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ವಾಗ್ದಾಳಿ‌ನಡೆಸಿದ್ದಾರೆ.

‌ಬುಧವಾರ ವಿವಿ ಟವರ್ ನಲ್ಲಿರುವ ತಮ್ಮ ಕಚೇರಿಯಲ್ಲಿ  ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‌ಸಚಿವರ  ಮೇಲೆ ಆಧಾರ ರಹಿತ ಹಾಗೂ ದುರುದ್ಧೇಶಪೂರ್ವಕವಾಗಿ ಭ್ರಷ್ಟಾಚಾರದ ಸುಳ್ಳು ಆರೋಪ ಹೊರಿಸಲಾಗಿದೆ‌. ಈ‌ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ರೀತಿ ವ್ಯರ್ಥ ಪ್ರಚಾರಕ್ಕೆ ಅವರು ಸುಳ್ಳು ಆರೋಪ‌ ಮಾಡುವ ಬದಲಿಗೆ ‌ಅವರು ರಾಜಕೀಯ ಕ್ಕೆ ಬರುವುದು ಒಳ್ಳೆಯದು ಎಂದು ಕಿಡಿಕಾರಿದ್ದಾರೆ.

ಮಠ ಸ್ವಾಮೀಜಿ ಅವರು ವಾಸ್ತವ ಸಂಗತಿಗಳನ್ನು ಹೇಳುತ್ತಿಲ್ಲ. ‌ಮಠದ ಅಭಿವದ್ದಿಗಾಗಿ ಇದುವರೆಗೂ 8 ಕೋಟಿ ಬಿಡುಗಡೆ ಆಗಿದೆ. 2011-12ನೇ ಸಾಲಿನಲ್ಲಿ ರೂ 2 ಕೋಟಿ ಹಾಗೂ 2012-13 ನೇ ಸಾಲಿನಲ್ಲಿ ಒಂದು ಕೋಟಿ ಮತ್ತು 2014-15ನೇ ಸಾಲಿನಲ್ಲಿ 2 ಕೋಟಿ ಸೇರಿ ಇಲ್ಲಿ ತನಕ ಮಠದ ಅಭಿವೃದ್ಧಿಗಾಗಿ ಒಟ್ಟು ಎಂಟುವರೆ ಕೋಟಿ ಅನುದಾನವನ್ನು ಸರ್ಕಾರದಿಂದ ಒದಗಿಸಲಾಗಿದೆ. ಈ ಬಗ್ಗೆ ದಾಖಲೆಗಳಿವೆ. ಇದರ 2011-12ನೇ ಸಾಲಿನಲ್ಲಿ ಮಂಡಿಸಿದ ಆಯವ್ಯದ ಭಾಷಣದ ಕಂಡಿಕೆಯಲ್ಲಿ ಗಾಣಿಗರ ಸಮುದಾಯದ ಗುರುಪೀಠ ಸ್ಥಾಪಿಸಲು 5 ಕೋಟಿ ರೂಗಳನ್ನು ನೀಡುವುದು ಎಂದು ಘೋಷಿಸಲಾಗಿದೆ.‌ ಇಷ್ಡಾಗಿಯೂ ವಾಸ್ತವ ಸಂಗತಿ ಮರೆ‌ ಮಾಚಿ 1.50 ಕೋಟಿ  ಕೊಡುವುದಕ್ಕೆ ಆರ್ಥಿಕ ಇಲಾಖೆ‌ ನಿಬಂಧನೆಗಳಿವೆ.ಇದನ್ನು ಮರೆ ಮಾಚಿ ಸಚಿವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:

ವಿಶ್ವಗಾಣಿಗರ ಸಮುದಾಯದ ಟ್ರಸ್ಟ್ ಇವರ ವತಿಯಿಂದ ಸ್ಥಾಪನೆಯಾಗಿರುವ‌ ವಿಶ್ವಗಾಣಿಗರ ಗುರುಪೀಠಕ್ಕೆ ಹಂತ- ಹಂತವಾಗಿ ‌ಸರ್ಕಾರದಿಂದ ಇದುವರೆಗೂ 8 ಕೋಟಿ ಅನುದಾನ ಸಿಕ್ಕದೆ. ಇದರಲ್ಲಿ ಸಮುದಾಯ ಭವನ ನಿರ್ಮಾಣ, ಕಟ್ಟಡ ನಿರ್ಮಾಣ, ಶೈಕ್ಷಣಿಕ ಉದ್ದೇಶ, ಧಾರ್ಮಿಕ ಚಟುವಟಿಕೆ, ಆಸ್ಪತ್ರೆ ನಿರ್ಮಾಣ, ಆರೋಗ್ಯ ಕೇಂದ್ರ ಮತ್ತು ಅಂಗವಿಕಲರಿಗಾಗಿ ಶಾಲೆ ಸ್ಥಾಪನೆ ಮಾಡಲಾಗುವುದು ಎಂದು ಅನುದಾನವನ್ನು ಸರ್ಕಾರದಿಂದ ಪಡೆದಿದ್ದಾರೆ.‌ಇದು ಎಷ್ಟರ ಮಟ್ಟಿಗೆ ಉಪಯೋಗ ಆಗಿದೆ ಎನ್ನುವ ಬಗ್ಗೆ‌ ಇದುವರೆಗೂ ಯಾವುದೇ ಪುರಾವೆ ಇಲ್ಲ ಅಷ್ಟಾಗಿಯೂ ಈ ರೀತಿ ಆರೋಪ ಮಾಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.

ಸ್ವಾಮೀಜಿ ಎನಿಸಿಕೊಂಡವರು ಒಂದು ಘನತೆಯಲ್ಲಿ ಬದುಕಬೇಕು. ಆದರೆ ಈ ಸ್ವಾಮೀಜಿ ಸುಖದಲ್ಲಿ ಬದುಕುವುದಕ್ಕಾಗಿ ರಾಜಕೀಯದಿಂದ ಹೊರ ಬಂದಂತೆ ತೋರಿಸಿ, ಈ ‌ನಾಟಕ ಆಡುತ್ತಿದ್ದಾರೆ. ಬಿಜೆಪಿ ಎಜೆಂಟ್ ರೀತಿ‌ ವರ್ತಿಸುತ್ತಿದ್ದಾರೆ‌. ಇದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

‌

About the Author

admin

Administrator

Visit Website View All Posts

Spread the love

Post navigation

Previous: ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ & ಮಾರಾಟ
Next: ಡಿಕೆ ಬ್ರದರ್ಸ್ ಸಿನಿಮಾ ಮಾಡಲು ಹೊರಟಿದ್ಲಾ ಐಶ್ವರ್ಯ ಗೌಡ..?

Views:

8

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.