ಬೆಂಗಳೂರು: ರಾಜಕೀಯ ರಂಗ ಹಾಗೂ ಸಿನಿಮಾ ರಂಗದವರು ಹೆಚ್ಚು ಒಡನಾಟವನ್ನು ಹೊಂದಿರುತ್ತಾರೆ. ಸಿನಿಮಾ ರಂಗದವರು ರಾಜಕೀಯಕ್ಕೆ ಎಂಟ್ರಿ ಕೊಡಬಹುದು ಹಾಗೆಯೇ ರಾಜಕೀಯದವರು ಸಿನಿಮಾ ಕೂಡ ಮಾಡಬಹುದು ಹೀಗೆ ಸಿನಿಮಾ ಮತ್ತು ರಾಜಕೀಯ ರಂಗವೂ ಬಹಳ ಒಡನಾಟವನ್ನು ಹೊಂದಿರುತ್ತವೆ..
ಅದರಲ್ಲೂ ಕೂಡ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗಂತು ಚಿತ್ರ ಚಿತ್ರರಂಗದ ಮೇಲೆ ಎಲ್ಲಿಲ್ಲದ ಪ್ರೀತಿ ಹಾಗೂ ಗೌರವ.
ಹೌದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಿತ್ರರಂಗವನ್ನು ಬಹಳ ಗೌರವದಿಂದ ಕಾಣುತ್ತಾರೆ. ಅಲ್ಲದೆ ಡಿಕೆ ಶಿವಕುಮಾರ್ ಅವರ ಒಡೆತನದ 23 ಸ್ಕ್ರೀನ್ಗಳಿವೆ ಎನ್ನಲಾಗಿದೆ.
ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೆಚ್ಚಿನ ನಟಿ ಯಾರು ಎಂದು ಹೇಳಿಕೊಂಡಿದ್ದಾರೆ. ಸಿನಿಮಾ ಪ್ರೀತಿ ಇಟ್ಕೊಂಡಿರುವ ಡಿಕೆ ಶಿವಕುಮಾರ್, ತಮ್ಮ ಅಚ್ಚುಮೆಚ್ಚಿನ ನಟಿ ಯಾರೋಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಕಲಾವಿದರು ಶಿವಣ್ಣ: ಎಂಬಿ ಪಾಟೀಲ್
ಬೆಂಗಳೂರು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನ್ಮಾನ ಮಾಡಿದಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ ಆದ ಕಾರಣ ನಾನು ಇದುವರೆಗು ಪ್ರಶಸ್ತಿ ತೆಗೆದುಕೊಳ್ಳಲು ನಾನು ಹೋಗಿಲ್ಲ. ನಾನು ಚಿತ್ರನಟಿ ಪ್ರೇಮಾ ಅವರ ದೊಡ್ಡ ಅಭಿಮಾನಿ. ಅವರು ಕಾರ್ಯಕ್ರಮದಲ್ಲಿ ನಮ್ಮನ್ನು ನಗಿಸುತ್ತಾರೆ ಎಂದುಕೊಂಡೆ ಏಕೋ ನಮ್ಮನ್ನೆಲ್ಲ ನಗಿಸಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
