ಬಿಜೆಪಿಯಲ್ಲಿ ಭ್ರಷ್ಟಚಾರ ಮಿತಿಮೀರಿದೆ-ಖರ್ಗೆ ಕಿಡಿ

ಬಿಜೆಪಿಯಲ್ಲಿ ಭ್ರಷ್ಟಚಾರ ಮಿತಿಮೀರಿದೆ-ಖರ್ಗೆ ಕಿಡಿ

ಶಹಾಪುರ : ಬಿಜೆಪಿಯವರಿಗೆ ಯಾವುದೇ ಸಾಧನೆಗಳಿಲ್ಲಾ. ಕಳೆದ ಚುನಾವಣೆಯಲ್ಲಿ ಮೋಸ ವಂಚನೆಯಿಂದ ಗೆದ್ದಿದ್ದಾರೆ. ಕೋಮುವಾದದ ವಿಷ ಬೀಜ ಬಿತ್ತುತ್ತಿದ್ದಾರೆ. ಬಿಜೆಪಿಯಲ್ಲಿ ‘ನ ಖಾವೀಂಗಾ ನಾ ಖಾನೇದುಂಗಾ’ ಬದಲು ಮೈ ಭೀ ಖಾವೂಂಗಾ ತುಮ್ ಭೀ ಖಾವೋ ಬದಲಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ ಖರ್ಗೆ ವಾಗ್ಧಾಳಿ ನಡೆಸಿದರು.

ನಗರದ ಆರಭೋಳ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಚುನಾವಣೆಯ ಹಿನ್ನಲೇಯಲ್ಲಿ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಚಾರ ಮಿತಿಮೀರಿದೆ ಮತ್ತು ಬಿಜೆಪಿಯವರು ಸೂಲಿಗೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಗುತ್ತೆಗೆದಾರರ ಸಂಘವು ಶೆ. 40 ಕಮಿಷನ್ ಕೊಡಬೇಕಾಗಿದೆ ಎಂದು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರವೇ ಸಾಕ್ಷಿಯಾಗಿದೆ.

ಕಾಂಗ್ರೆಸ್‌ನವರು ತಾವು ಮಾಡಿದ ಅಭಿವೃದ್ಧಿ ಮತ್ತು ಸೇವೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಆದರೆ ಮೋದಿ ನೋಡಿ ಮತ ಹಾಕಿ ಎನ್ನುತ್ತಿರುವ ಬಿ.ಜಿ ಪಾಟೀಲ್‌ರು ಮುಂದೆ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಕೇಳಲು ಮೋದಿ ಬರುತ್ತಾರೆಯೇ ಎಂದು ಕಿಡಿಕಾರಿದರು. ಬಿಜೆಪಿಯ ಸಚಿವರೇ ಯಡಿಯೂರಪ್ಪ ಅವರು ಭ್ರಷ್ಟಚಾರದಲ್ಲಿ ತೊಡಗಿಕೊಂಡಿದ್ದಾರೆ ಸಿದ್ರಾಮಯ್ಯ ನವರೇ ಲೇಸು ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿದ್ದು ಕುರುಬರಿಗೆ ಮತ್ತು ಕೂಲಿ ಸಮಾಜದವರಿಗೆ ಎಸ್.ಟಿ ಮೀಸಲಾತಿ ನೀಡುವುದಾಗಿ ಅನ್ಯಾಯ ಮಾಡುತ್ತಿವೆ. ಚುನಾವಣೆಯಲ್ಲಿ ಖರ್ಗೆ ಅವರನ್ನು ಸೋಲಿಸಿ ಎಂದವರು ಇದೀಗ ಮಲ್ಲಿಕಾರ್ಜುನ್ ಖರ್ಗೆ ಅವರು ಮನಸ್ಸು ಮಾಡಿದರೆ ಎಸ್.ಟಿ ಸೇರ್ಪಡೆಯಾಗಲಿದೆ ಎಂದು ಹೇಳುತ್ತಿದ್ದು ಇಂತಹ ಲೇಕ್ಕಾಚಾರ ಸರಿಯಲ್ಲಾ. ಬಿಜೆಪಿಯವರಿಗೆ ನಾಚಿಕೆ ಮತ್ತು ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಇಚ್ಚಾಶಕ್ತಿಯಿಲ್ಲಾ ಎಂದು ಹರಿಹಾಯ್ದರು.

ಅಭಿವೃದ್ಧಿ ಮಾಡಬೇಕಾದ ಹಕ್ಕು ಕೇವಲ ಶಾಸಕರಿಗೆ ಸಂಸದರಿಗೆ ಅಷ್ಟೆ ಸಿಮೀತವಲ್ಲದೇ ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿಯೂ ಇರಬೇಕು. ಹಳ್ಳಿಯ ಜನರಿಂದ ಆಯ್ಕೆಯಾಗಿ ಬಂದ ಗ್ರಾ.ಪಂನವರಿಗೆ ಸಮಸ್ಯೆಗಳನ್ನು ಅರಿತ್ತಿರುತ್ತಾರೆ ಎನ್ನುವ ದೃಷ್ಟಿಯಿಂದ ಈ ವ್ಯವಸ್ಥೆ ಕಲ್ಯಾಣಕ್ಕಾಗಿ ಜಾರಿಗೆ ಬಂದಿದ್ದು, ದುಡಿಯುವ ಕೈಗಳಿಗೆ ಬಲ ನೀಡಿದ್ದು ಕಾಂಗ್ರೆಸ್ ನವರಿಂದಲೇ ಕಲ್ಯಾಣವಾಗುತ್ತಿದೆ.  ನೀರಾವರಿಗೆ 10 ಸಾವಿರ ಕೋಟಿ ನೀಡಿದೆ. ಮಾತ್ರಪೂರ್ಣ, ಕ್ಷೀರಭಾಗ್ಯ, ಕ್ಷೀರಧಾರೆ ಸೇರಿದಂತೆ ವಿವಿಧ ಆರ್ಥಿಕ ಬಲವರ್ಧನೆಗೆ ಯೋಜನೆಗಳನ್ನು ಜಾರಿಗೆ ತಂದಿದೆ. ಜಾತಿಗೆ ಸೀಮಿತವಲ್ಲ ಸಮಾಜದ ಪ್ರತಿ ವರ್ಗದ ಜನರಿಗೆ ತಲುವಂತಾಗಲು ಮಾಡಿದೆ ಎಂದರು.

ಈ ವೇಳೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಈ ಚುನಾವಣೆಯು ಎಲ್ಲಾರ ಪ್ರತಿಷ್ಠೆಯನ್ನು ಉಳಿಸುವಂತಾಗಿದ್ದು ಹಣದ ಆಮಿಷ್ಯಕ್ಕೆ ಒಳಗಾಗದೇ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್‌ರಿಗೆ ಅಮೂಲ್ಯವಾದ ಮತ ನೀಡಿ. ಕೆಂಭಾವಿ ಹೋಬಳಿ ಪಂಚಾಯತ್‌ಗಳಿಗೆ ಭೇಟಿ ನೀಡಲಾಗಿದೆ.
ತಾ.ಪಂ ಸದಸ್ಯರಾಗಿ, ಜಿ.ಪಂ ವಿರೋಧ ಪಕ್ಷದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮತಗಳನ್ನು ಹಾಕಿಸುವಂತಹ ಕೆಲಸ ಮಾಡಿದಾಗ ಕೀರ್ತಿ ಎಲ್ಲ ಮತದಾರರಿಗೆ ಸಲ್ಲುತ್ತದೆ. ಈ ಭಾಗದ ಜನತೆಗೆ ನೀರು ಒದಗಿಸುವ ಕೆಲಸ ನಮ್ಮ ತಂದೆಯವರಾದ ಬಾಪುಗೌಡರು ಮತ್ತು ಕಾಂಗ್ರೆಸ್ ಸರ್ಕಾರದಿಂದಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆದರೆ ರೈತರ ಪರ ಪ್ಯಾಕೇಜ್ ನೀಡುವ ಬದಲು ಕೈಗಾರಿಕೆಗಳ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ಬಿಜೆಪಿ ವಂಚಿಸುತ್ತಿದೆ.

ಶಿವಾನಂದ ಪಾಟೀಲರು ಗ್ರಾಮೀಣ ಭಾಗದ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಸಷ್ಟವಾದ ಕನಸು ಕಾಳಜಿಯನ್ನು ಹೊಂದಿದ್ದಾರೆ. ಕಷ್ಟ ಸುಖಗಳಲ್ಲಿ ಭಾಗಿಯಾಗುವಂತಹ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಉಳಿದರೆ ಎಲ್ಲ ಸಮಾಜದವರ ಅಭಿವೃದ್ಧಿ ಸಾಧ್ಯ. ಪರಿಷತ್ ಚುನಾವಣೆಯಲ್ಲಿ ಶಿವಾನಂದ ಪಾಟೀಲ್‌ರನ್ನು ಅಧಿಕ ಬಹುಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಕೋರಿದರು.

ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ್ ಹಾಗೂ ಶಾಸಕ ಅಜಯ್ ಸಿಂಗ್ ಮಾತನಾಡಿ, ಬಿಜೆಪಿಯವರು ತಳಮಟ್ಟದಿಂದಲೇ ಭ್ರಷ್ಟಚಾರ ಹರುಡುತ್ತಿದ್ದಾರೆ. ಇದೀಗ ವ್ಯಾಪಕವಾಗಿ ಹೆಮ್ಮರವಾಗಿ ಬೆಳೆದಿದೆ ಎಂದು ಕಿಡಿಕಾರಿದರು. ವಿಧಾನ ಪರಿಷತ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮಾತನಾಡಿ, ಒಮ್ಮೆ ಅವಕಾಶ ನೀಡಿ ಗ್ರಾಮೀಣ ಬಾಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್, ಚಂದ್ರಶೇಖರ ಆರಭೋಳ, ಅಲ್ಲಮಪ್ರಭು ಪಾಟೀಲ್, ಶರಣಪ್ಪ ಸಲಾದಪೂರ, ಬಸವರಾಜಪ್ಪಗೌಡ ತಂಗಡಗಿ, ಸಿದ್ಧಲಿಂಗಪ್ಪ ಆನೇಗುಂದಿ, ಗುಂಡಪ್ಪ ತುಂಬಗಿ, ಅಂಬರೇಶಗೌಡ ದರ್ಶನಾಪುರ, ಬಸಣಗೌಡ ಸುಭೇದಾರ್, ಬಸವರಾಜ ಜಿ ಹಿರೇಮಠ, ಭೀಮಣ್ಣ ಮೇಟಿ, ಬಸಣಗೌಡ ಹೋಸ್ಮನಿ, ಹಣಮೇಗೌಡ ಮರಕಲ್, ಮಲ್ಲಪ್ಪ ಉಳ್ಳಂಡಗೇರ, ಅಮೀನರೆಡ್ಡಿ ಕಿರದಳ್ಳಿ, ನಿಲಕಂಠ ಬಡಿಗೇರ, ಮಲ್ಲಯ್ಯ ಫೀರಂಗಿ, ನಾಗಪ್ಪ ಕಾಶಿರಾಜ, ಮುಸ್ತಫಾ ದರ್ಭಾನ್, ಸುಭಾನಿಸಾಬ್ ಮಲ್ಲಾ, ಧರ್ಮಬಾಯಿ ರಾಠೋಡ್, ಮೌನೇಶ್ ನಾಟೇಕರ್ ಸೇರಿದಂತೆ ಗ್ರಾ.ಪಂ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಕಾಂಗ್ರೆಸ್‌ನ ಹಿರಿಯ ಮುಕಂಡರು, ರುದ್ರಣ್ಣ ಚಟ್ರಕಿ, ಬಸವರಾಜ ಚಿಂಚೋಳಿ, ಕಾರ್ಯಕರ್ತರು ಇನ್ನಿತರರಿದ್ದರು.

Related