ಮುಂದುವರೆದ ಹೋರಾಟ : ಪಾದಯಾತ್ರೆ

ಮುಂದುವರೆದ ಹೋರಾಟ : ಪಾದಯಾತ್ರೆ

ಇಂಡಿ : ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆ.ಡಿ.ಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ 40 ದಿನಕ್ಕೆ ಮುಂದುವರೆದಿದೆ. ಹೋರಾಟಗಾರರು ಮತ್ತು ಬೊಳೆಗಾಂವ, ತಡವಲಗಾ, ಲಿಂಗದಳ್ಳಿ, ಕ್ಯಾತನಕೇರಿ, ಬಸನಾಳ ಗ್ರಾಮದ ರೈತರು ಪಾದಯಾತ್ರೆ ವೇಳೆಯಲ್ಲಿ ರೂಗಿ ಗ್ರಾಮದ ಜಟ್ಟಿಂಗರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಜೆಡಿಎಸ್ ಮುಖಂಡ ಬಿ.ಡಿಪಾಟೀಲ ಮಾತನಾಡಿ, ರೈತರ ನಡೆ ಹಳ್ಳಿಯ ಕಡೆ, ನೀರಾವರಿಯ ಕಡೆ ಎಂಬ ಘೋಷಣೆಯೊಂದಿಗೆ ಪ್ರತಿ ಗ್ರಾಮಗಳಲ್ಲಿ ಸಭೆ ನಡೆಸಿ ನೀರಾವರಿ ಕುರಿತು ಪರಿಸ್ಥಿತಿ ರೈತರಿಗೆ ತಿಳಿಸುವುದು, ನೀರಾವರಿ ಆಗುವ ಅವಶ್ಯಕತೆ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ತಾಲೂಕು ಉಪಾಧ್ಯಕ್ಷ ಬಸವರಾಜ ಹಂಜಗಿ, ವಿನಾಯಕ ಗುಣಸಾಗರ, ಸಿದ್ದಪ್ಪ ಗುನ್ನಾಪುರ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ ಮಾತನಾಡಿದರು.

ಈ ಸಂದರ್ಭದಲ್ಲಿ ಹೋರಾಟದಲ್ಲಿ ಲಚ್ಯಾಣ ಗ್ರಾ.ಪಂ ಸದಸ್ಯ ಈರಣ್ಣ ಮುಜಗೊಂಡ, ಗುರುನಾಥ ಮುಜಗೊಂಡ, ಮುದಕಣ್ಣ ಅವಜಿ, ಸಿದ್ದರಾಮಯಳಮೇಲಿ ಸೇರಿದಂತೆ ಮಾಳಪ್ಪ ನಿಂಬಾಳ, ಜೆಟ್ಟಪ್ಪ ಸಾಲೋಟಗಿ, ಲಕ್ಷö್ಮಣ ಪೂಜಾರಿ, ಹಣಮಂತ ಹೂನ್ನಳ್ಳಿ, ಮಾಳಪ್ಪ ಹಲಸಂಗಿ, ಪರಸು ಸಾಲೋಟಗಿ, ಕೇದಾರನಾಥ ಕೇಸುಗಳು, ರಾಜು ಹಲಸಂಗಿ, ನಿಂಗಪ್ಪ ಡಂಗಿ, ಬಸವರಾಜ ಡಂಗಿ, ತಾರಾಸಿಂಗ ರಾಠೋಡ, ದುಂಡು ಬಿರಾದಾರ, ಮಹಿಬೂಬ ಬೇವನೂರ, ಫಜಲು ಮುಲ್ಲಾ, ರವಿ ಶಿಂಧೆ, ವಿಠ್ಠಲ ಹಳ್ಳಿ, ರಮೇಶ ಹೊಸಮನಿ, ಡಾ. ಪದ್ಮರಾಜ ಪೂಜಾರಿ ಇನ್ನಿತರರಿದ್ದರು.

Related