ಬೆಂಗಳೂರು: ನಗರದ ಕೇಂಬ್ರಿಡ್ಜ್ ಸಂಸ್ಥೆಯಲ್ಲಿ ನಡೆಯುತ್ತಿರುವ 3 ದಿನಗಳ ಕಾರ್ಯಗಾರದ ಎರಡನೇ ಅಂತರಾಷ್ಟ್ರೀಯ ಜವಹಾರ್ ಬಾಲ್ ಮಾಂಚ್ 2025 ನೇ ಸಾಲಿನ ಸಂವಾದ ಕಾರ್ಯಕ್ರಮವನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.
ನಾವೀಗ ಮುಕ್ತ ಸ್ವಾತಂತ್ರ್ಯ ಚಳವಳಿಗೆ ಹಿಂತಿರುಗುತ್ತಿದ್ದೇವೆ ಭಾರತೀಯ ಇತಿಹಾಸ 1805. ಕಾಂಗ್ರೆಸ್ ಹೇಗೆ ಪ್ರಾರಂಭವಾಯಿತು ಆ ಕಾಲದ ಗುರಿಗಳು ಯಾವುವು ಎಂಬುದು ಇತಿಹಾಸವು ಪುನರಾವರ್ತನೆಯಾಗುತ್ತದೆ.
ಈ ದೇಶದಲ್ಲಿ ಲಕ್ಷ ಲಕ್ಷ ಜನರು ಪ್ರಾಣ ಕೊಟ್ಟರು ಮತ್ತು ಅವರು ಜೈಲಿನಲ್ಲಿದ್ದರು. ಈ ದೇಶ ಜಾತ್ಯತೀತ ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು ಎಲ್ಲರೂ ಒಟ್ಟಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ಸಂಘಟನೆಯಲ್ಲಿ ಸದಾ ಮುಂದಾಗಬೇಕಿರುವುದು ಯುವಕರು ಅದೇರೀತಿಯಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ಅಭಿಪ್ರಾಯದಂತೆ ಜವಹಾರ್ ಲಾಲ್ ಮಂಚ್ ಎಂಬ ಘೋಷ ವಾಖ್ಯೆದಂತೆ ನಮ್ಮ ದೇಶದಲ್ಲಿ ಸಂಘಟನೆಗೆ ಪ್ರಮುಖ ವೇದಿಕೆ ನಿರ್ಮಾಣವಾಗಿದೆ. ಇದನ್ನೂ ಓದಿ: ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರ ನಿಯಮ ಪಾಲಿಸಿ
ಕಾಂಗ್ರೆಸ್ ಪಕ್ಷದ ಬೆಳೆದ ದಾರಿ ನೆನಪಿಸಿದಾಗ ನಮ್ಮ ಭಾರತ ದೇಶಕ್ಕೆ ಮಹಾನ್ ಚೇತನಗಳಾದ ಜವಹಾರ್ ಲಾಲ್ ನೆಹರೂ, ಮಹಾತ್ಮ ಗಾಂಧೀಜಿ,ಮೊಲಾನಾ ಅಜಾದ್,ಸುಭಾಷ್ ಚಂದ್ರ ಬೋಸ್,ಸರ್ದಾರ್ ವಲ್ಲಭಭಾಯಿ ಪಟೇಲ್, ಹಾಗೂ ಹಲವಾರು ನಾಯಕರ ತ್ಯಾಗ ಬಲಿದಾನದ ಫಲವಾಗಿ ಈ ದೇಶಕ್ಕೆ ಸ್ವಾತಂತ್ರ್ಯ ಬಂತು.
ಈ ಸಂವಾದದ ಮೂಲಕ ಎಲ್ಲಾ ಪದವೀಧರ ಯುವಕರಿಗೆ ನಮ್ಮ ಕಾಂಗ್ರೆಸ್ ಪಕ್ಷದ ಇತಿಹಾಸ ಗೊತ್ತಾಗಬೇಕು ಮತ್ತು ಈ ದೇಶಕ್ಕೆ ಜವಹಾರ್ ಲಾಲ್ ನಹರೂ ಹಾಗೂ ಗಾಂಧೀಜಿಯವರ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದರು
ವಿವಿಧ ರಾಜ್ಯಗಳಿಂದ ಭಾಗವಹಿಸಿದ ಯುವಕರು ಹಾಗೂ ಸಂಘಟಕರಿಗೆ ತಾವು ಮಹಾತ್ಮ ಗಾಂಧಿಯವರು ಮಾರ್ಗದರ್ಶನದಲ್ಲಿ ನಡೆಯಬೇಕು
ರಾಹುಲ್ ಗಾಂಧಿಯವರು ಭಾರತ್ ಜೋಡೋ ಪಾದಯಾತ್ರೆಯ ಮೂಲಕ ದೇಶವನ್ನು ಒಟ್ಟುಗೂಡಿಸವ ಮೂಲಕ ಸಂಘಟನೆ ಮಾಡಿಸುತ್ತಿದ್ದಾರೆ ಅದೇ ಮಾರ್ಗವಾಗಿ ಜವಹಾರ್ ಲಾಲ್ ಮಾಂಚ್ ಕಾರ್ಯಕ್ರಮದ ಮೂಲಕ ದೇಶದಲ್ಲಿ ಇನ್ನಷ್ಟು ಬಲಪಡಿಸುವ ಮೂಲಕ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.
