ಪೌರತ್ವ ಕಾಯಿದೆ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ 25ಸಾವಿರ ಹಸ್ತಾಕ್ಷರ ಮನವಿ

ಪೌರತ್ವ ಕಾಯಿದೆ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ 25ಸಾವಿರ ಹಸ್ತಾಕ್ಷರ ಮನವಿ


ಹುಬ್ಬಳ್ಳಿ, ಜ. 23: ಪೌರತ್ವ ತಿದ್ದುಪಡಿ ಕಾಯಿದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ವೇಲ್ಪೆರ್ ಪೀಸ್ ಕೌನ್ಸಿಲ್ ವತಿಯಿಂದ 25 ಸಾವಿರ ಹಸ್ತಾಕ್ಷರ ಮನವಿಯನ್ನು ತಹಶಿಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.

ಪೌರತ್ವ ಕಾಯಿದೆ ದೇಶದಲ್ಲಿ ಕೋಮುವಾದ ಸೃಷ್ಟಿಸುತ್ತಿದ್ದು, ದೇಶದ ಏಕತೆಗೆ ದಕ್ಕೆ ತರುತ್ತಿರುವ ಹಾಗೂ ಅಲ್ಪಸಂಖ್ಯಾತ ವಿರೋಧಿ ನೀತಿಯಾಗಿರುವ ಸಿಎಎ ಹಾಗೂ ಎನ್.ಆರ್.ಸಿ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನದ ವಿರೋಧಿಯಾಗಿದ್ದು, ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಪೌರತ್ವ ತಿದ್ದುಪಡಿ ಕಾಯಿದೆ ಒಂದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಇಪ್ಪತ್ತೈದು ಸಾವಿರ ಹಸ್ತಾಕ್ಷರ ಮನವಿಯನ್ನು ಸಲ್ಲಿಸುತ್ತಿದ್ದೇವೆ ಕೂಡಲೇ ಕೇಂದ್ರ ಸರ್ಕಾರ ಜನ ವಿರೋಧಿ ಸಿಎಎ ಹಾಗೂ ಎನ್.ಆರ್.ಸಿ ಕಾಯಿದೆ ಹಿಂಪಡೆದು ಜನರ ಹಿತವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ‌ಸೈಯದ್ ಅಜಾರ್ ಬೇಲೆರಿ,ಆರ್.ಡೋಮನಿ,ಅಲ್ತಾಫ್ ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related