Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬಿಜೆಪಿಯವರಿಗೆ ಹುಚ್ಚು ಹಿಡಿದಿದೆ; ಸಚಿವ ದರ್ಶನಾಪುರ
  • Front news
  • Politics
  • State

ಬಿಜೆಪಿಯವರಿಗೆ ಹುಚ್ಚು ಹಿಡಿದಿದೆ; ಸಚಿವ ದರ್ಶನಾಪುರ

admin May 24, 2025
Spread the love

ಶಹಾಪುರ; ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಜನಾಕ್ರೋಶ ಇರುವುದು ಕೇಂದ್ರ ಸರ್ಕಾರದ ವಿರುದ್ಧವೇ ಹೊರತು, ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲಲ್ಲ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು (ಶನಿವಾರ ಮೇ 24) ರಂದು ವಿವಿಧ ಕಾಮಗಾರಿ ವಿಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮೊದಲು ಜನಮತ ಪಡೆದು ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಿಕೊಳ್ಳಿ. ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ ಎಂದು ಪ್ರಧಾನಿ ಹೇಳಿದರು. ಆದರೆ ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ಎಲ್ಲ ರಾಜ್ಯಗಳ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅವರೇ ಘೋಷಣೆ ಮಾಡಿದ್ದಾರೆ. ನಮ್ಮ ಯೋಜನೆಗಳು ಕರ್ನಾಟಕ ಮಾಡೆಲ್ ಆಗಿ ದೇಶಕ್ಕೆ ಮಾದರಿಯಾಗಿದೆ. 15 ಲಕ್ಷ ರೂ ಕೊಡುತ್ತೇವೆ ಎಂದು ಹೇಳಿ 11 ವರ್ಷ ಕಳೆಯಿತು ಆದರೂ 1 ರೂ. ಜಮಾ ಆಗಲಿಲ್ಲಾ. ರೈತರಿಗೆ ಸಾಲಮನ್ನಾ ಮಾಡಿದ್ದಾರೆಯೇ, ಗೊಬ್ಬರ ಬೆಲೆ ಕಡಿಮೆ ಮಾಡಿದ್ದಾರೆಯೇ? ಆದರೆ ರಾಜ್ಯ ಸರ್ಕಾರ ಗಂಭೀರ ಪರಿಸ್ಥೀತಿಯಲ್ಲಿಯೂ ರೈತರಗೆ ಬಡ್ಡಿಮನ್ನಾ ಮಾಡಿದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಪರ ದರ್ಶನಾಪುರ ಬ್ಯಾಟಿಂಗ್

ಸಚಿವ ಪ್ರಿಯಾಂಕ್ ಅವರು ಪ್ರಧಾನಿ ಮೋದಿ ಅವರಿಗೆ ಕೆಟ್ಟ ಶಬ್ಧ ಬಳಕೆ ಮಾಡಿದ್ದಾರೆಯೇ? ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನ್‌ರಾಂ ಅವರು ಗೃಹ ಮಂತ್ರಿಗಳಾಗಿದ್ದ ವೇಳೆ ನಾವು ಯುದ್ಧವನ್ನು ಗೆದ್ದಿಲ್ಲವೇ? ಈಗಾಲೂ ಒಂದೆರಡು ಬಾಂಬ್ ಹಾಕಿರಬಹುದು. ಇಂಧೀರಾ ಗಾಂಧಿ ಅವರು ಸಹ ಯುದ್ಧವನ್ನು ಗೆದ್ದಿದ್ದಾರೆ. ಆದರೆ ಬಿಜೆಪಿಯವರು ಗಡಿಯಲ್ಲಿ ಸೈನಿಕರು ಯುದ್ಧ ಮಾಡಿದರೆ ಇಲ್ಲಿ ತಾವೇ ಯುದ್ಧ ಮಾಡಿದ ಹಾಗೇ ಬಿಂಬಿಸುತ್ತಿದ್ದಾರೆ. ಕದನ ವಿರಾಮ ಘೋಷಿಸಬಾರದಿತ್ತು, ಒಂದು ಬಾರಿ ಭಾರತೀಯ ಸೇನೆಯ ಶಕ್ತಿ ಏನು ಎಂಬುದನ್ನು ತೋರಿಸಬೇಕಾಗಿತ್ತು ಎಂದರು. ಇದನ್ನೂ ಓದಿ: ಚಿಕ್ಕಮಂಗಳೂರಿನಲ್ಲಿ ಹವಾ ಎಬ್ಬಿಸಿದ ಲಕ್ಷ್ಮಿ ಹೆಬ್ಬಾಳ್ಕರ್!

ಕಲ್ಯಾಣ ಪಥ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. 850 ಕೋಟಿ ರೂ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 24 ಪಿಎಚ್‌ಸಿ, 6 ಸಿಎಚ್‌ಸಿ, ತಾಲೂಕ ಆಸ್ಪತ್ರೆಗಳು, 150 ಹಾಸಿಗೆ ಆಸ್ಪತ್ರೆಗಳು, 100 ಹಾಸಿಗೆ ಆಸ್ಪತ್ರೆಗಳು ಮಂಜೂರಿಯಾಗಿದ್ದು, ಟೆಂಡರ್ ಆಗಿವೆ. ಶಹಾಪುರ ಕ್ಷೇತ್ರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಗೋಗಿ ಕಮ್ಯೂನಿಟಿ ಹಾಲ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿ ಇನ್ನಿತರ ಕಾಮಗಾರಿ ನಡೆಯಲಿವೆ ಎಂದರು.

About the Author

admin

Administrator

Visit Website View All Posts

Spread the love

Post navigation

Previous: ಚಿಕ್ಕಮಂಗಳೂರಿನಲ್ಲಿ ಹವಾ ಎಬ್ಬಿಸಿದ ಲಕ್ಷ್ಮಿ ಹೆಬ್ಬಾಳ್ಕರ್!
Next: ಪ್ರಿಯಾಂಕ್ ಖರ್ಗೆ ಕಂಡ್ರೆ ಬಿಜೆಪಿಗೆ ಭಯ : ಶರಣ ಪ್ರಕಾಶ್ ಪಾಟೀಲ್

Views:

13

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.