ಶಹಾಪುರ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಅಭಿವೃದ್ದಿಗೆ ಅತ್ಯಂತ ನಿಷ್ಠೇ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು, ಜಿಲ್ಲೇಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಸಚಿವರ ವಿರುದ್ಧ ನೀಡಿರುವ ಹೇಳಿಕೆ ಖಂಡನಾರ್ಹ ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮತ್ತು ನಗರಸಭೆ ಸದಸ್ಯ ಸಿದ್ದಣ್ಣ ಆರಭೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಶಹಾಪುರಗೆ ಸಿಮೀತ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ್ದು, ಸಚಿವ ದರ್ಶನಾಪುರ ಅವರು ತಮ್ಮ ರಾಜಕೀಯ ಜೀವನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಹಿರಿಯ ವಯಸ್ಸಿನಲ್ಲಿ ಯಾರ ಬಗ್ಗೆ ಏನೂ ಮಾತನಾಡಬೇಕು ಎಂಬುವುದನ್ನು ಅರಿತು ಮಾತನಾಡಬೇಕು. ಇದನ್ನೂ ಓದಿ: ನೀರಿನ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ
ಇವರಿಗೆ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ದಿ ಕಾರ್ಯಗಳು ಕಣ್ಣಿ ಕಾಣಿಸುತ್ತಿಲ್ಲಾ ಅನಿಸುತ್ತಿದೆ. ಕ್ಷೇತ್ರದ ಜನತೆ ಎಲ್ಲವನ್ನೂ ಗಮನನಿಸುತ್ತಾರೆ ಎಂಬ ಪ್ರಜ್ಞೆ ಇರಲಿ. ಸಚಿವ ದರ್ಶನಾಪುರ ಅವರು ಜನರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುವ ಜನನಾಯಕರಾಗಿದ್ದು. ಅದು ಇಡೀ ರಾಜ್ಯಕ್ಕೆ ಗೊತ್ತಿದೆ. ನಾಲಿಗೆ ಹರಿಬಿಟ್ಟರೆ ನೀವೆನು ದೊಡ್ಡವರಾಗುವುದಿಲ್ಲ. ದರ್ಶನಾಪುರ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ನಿಮಗೆ ಶೋಭೆ ತರುವಂತದಲ್ಲ. ಆದ್ದರಿಂದ ಕೂಡಲೇ ಬಸವರಾಜಪ್ಪ ವಿಭೂತಿಹಳ್ಳಿ ಕ್ಷೇಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
