ಬೆಂಗಳೂರು: ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಅತ್ಯಾ*ಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರು ಆರೋಪಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಇಂದು ಶು(ಕ್ರವಾರ ಆ. 01) ರಂದು ಮಹತ್ವದ ತೀರ್ಪು ಪ್ರಕಟಿಸಿದೆ. ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಇದೀಗ ಪ್ರಜ್ವಲ್ ರೇವಣ್ಣ ಅವರಿಗೆ ದಿಗ್ ಭ್ರಮೆ ಬಡಿದಂತಾಗಿದೆ.
ಪ್ರಜ್ವಲ್ ರೇವಣ್ಣ ಅವರು ಇಂದಿನ ತೀರ್ಪಿನ ಬಗ್ಗೆ ಮಹತ್ವದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಇಂದಿನ ತೀರ್ಪು ಪ್ರಜ್ವಲ್ ರೇವಣ್ಣ ಅವರಿಗೆ ನಿರಾಸೆಯನ್ನುಉಂಟು ಮಾಡಿದೆ. ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಎಷ್ಟು ವರ್ಷ ಶಿಕ್ಷೆಯಾಗಲಿದೆ ಎಂದು ನಾಳೆ ಸಾಬೀತಾಗಲಿದೆ. ಇದನ್ನೂ ಓದಿ: ಇಂದಿನ ಕೋರ್ಟ್ ತೀರ್ಪಿನ ಮೇಲಿದೆ ಮುಂದಿನ ಪ್ರಜ್ವಲ್ ರೇವಣ್ಣನ ಭವಿಷ್ಯ
ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್ಗಳು ದಾಖಲಾಗಿದ್ದವು. ಈ 4 ಕೇಸ್ಗಳ ಪೈಕಿ 1 ಪ್ರಕರಣದ ತೀರ್ಪು ಮಾತ್ರ ಪ್ರಕಟವಾಗಿದೆ. ಮನೆ ಕೆಲಸದಾಕೆ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪು ಪ್ರಕಟಿಸುವ ಮುನ್ನ, ಕೋರ್ಟ್ ಎರಡೂ ಕಡೆ ವಕೀಲರಿಂದ ಕೆಲವು ಸ್ಪಷ್ಟನೆ ಕೇಳಿತ್ತು.
