ಕ್ಯಾನ್ಸರ್‌ನಿಂದ ಮಹಿಳೆಯರು ಜಾಗೃತಿ ವಹಿಸಿ

ಕ್ಯಾನ್ಸರ್‌ನಿಂದ ಮಹಿಳೆಯರು ಜಾಗೃತಿ ವಹಿಸಿ

ದೇವನಹಳ್ಳಿ: ವಿಜಯಪುರ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಉಚಿತ ಸ್ತ್ರೀ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರದಲ್ಲಿ 70 ರಿಂದ 80 ಮಹಿಳೆಯರು ತಪಾಸಣೆಗೆ ಒಳಗಾಗುತ್ತಿದ್ದು, ಮಹಿಳೆಯರ ಆರೋಗ್ಯದ ಜಾಗೃತಿಯೂ ಶಿಬಿರದ ಉದ್ದೇಶವಾಗಿದೆ ಎಂದು ವೀಲ್ ಕ್ಲಬ್ ಅಧ್ಯಕ್ಷೆ ಸುಮನ ಮದ್ಕವಿ ಶನಿವಾರ ತಿಳಿಸಿದರು.
ಭಾರತದಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿದೆ. ಬಾಯಿ ಕ್ಯಾನ್ಸರ್ , ಸ್ತನ ಕ್ಯಾನ್ಸರ್, ಗರ್ಭ ಕೊರಳಿನ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತಿದೆ. ಮಹಿಳೆಯರು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕ್ಯಾನ್ಸರ್ ರೋಗ ಮಾರಕವಲ್ಲ. 40 ರ‍್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಗರ್ಭ ಕೊರಳಿನ ಕ್ಯಾನ್ಸರ್ ತಪಾಸಣೆ ತಪ್ಪದೆ ಮಾಡಿಸಿ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಮಗೆ ಸಹಯೋಗ ನೀಡುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ವಿಜಯಪುರ ಅಧ್ಯಕ್ಷೆ ಚಂದ್ರಕಲಾ ನರೇಂದ್ರ, ಕರ‍್ಯರ‍್ಶಿ ದೀಪ ಮುರಳೀಧರ್, ಭಾರತಿ ಶಿವಪ್ರಸಾದ್, ನವ್ಯ, ನಿಕಟಪರ‍್ವ ಅಧ್ಯಕ್ಷೆ ಗಾಯತ್ರಿ ಮಂಜುನಾಥ್, ಚಂದ್ರಕಲಾ ರುದ್ರಮರ‍್ತಿ, ಕಿದ್ವಾಯಿ ಆಸ್ಪತ್ರೆಯ ಡಾ.ಚೇತನ್, ವಿಘ್ನೇಶ್, ಹಾಗೂ ಕಿರಿಯ ವೈದ್ಯರು,ಇನ್ನರ್ ವೀಲ್ ಸಂಘದ ಪರ‍್ವಧ್ಯಕ್ಷರು,ಸದಸ್ಯರು ಹಾಗೂ ಬೆಂಗಳೂರು ಉತ್ತರ ವಿಭಾಗದ ಸದಸ್ಯರು ಇದ್ದರು.

Related