ವಿಶ್ವಕರ್ಮ ಸಮಾಜಕ್ಕೆ ಸ್ಮಶಾನ ಜಾಗ ನೀಡುವಂತೆ ಆಗ್ರಹಿಸಿ

ವಿಶ್ವಕರ್ಮ ಸಮಾಜಕ್ಕೆ ಸ್ಮಶಾನ ಜಾಗ ನೀಡುವಂತೆ ಆಗ್ರಹಿಸಿ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ವಿಶ್ವಕರ್ಮ ಸಮಾಜಕ್ಕೆ ಸ್ಮಶಾನ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ವತಿಯಿಂದ ಸೋಮವಾರ ಶಿರಸ್ತೆದಾರ ವಿ.ಸಿ ತೊನಿಶ್ಯಾಳ ಹಾಗೂ ತಾಲ್ಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ತಾಲ್ಲೂಕಿನ ತಂಗಡಗಿ ಗ್ರಾಮದ ವಿಶ್ವಕರ್ಮ ಸಮಾಜದವರು ಹಿರಿಯ ಮರಣ ಹೊಂದಿದರೇ ಅವರ ಅಂತ್ಯಕ್ರೀಯೆ ನಡೆಸಲು ಜಾಗವಿಲ್ಲದೇ ಕೃಷ್ಣಾ ನದಿಯ ತೀರದಲ್ಲೋ ಅಥವಾ ಯಾವುದೋ ಒಂದು ರಸ್ತೆ ಪಕ್ಷದಲ್ಲೋ ಅಂತ್ಯಸಂಸ್ಕರಾ ನಡೆಸುವಂತಾಗಿದೆ.

ಆದರೇ ಇಲ್ಲಿತನಕವೂ ಸರ್ಕಾರದಿಂದಾಗಿ ಪಂಚಾಯಿತಿಯಿಂದಾಗಲಿ ನಮಗೆ ಪ್ರತ್ಯೇಕ ಸ್ಮಶಾನ ಜಾಗ ನೀಡಿರುವುದಿಲ್ಲ. ತಂಗಡಗಿ ಗ್ರಾಮದ ಸರ್ವೇ ನಂ. 124 ಒಂದು ಎಕರೆ 24 ಗುಂಟೆ ಸಾರ್ವಜನಿಕ ಸ್ಮಶಾನ ಜಾಗಕ್ಕಾಗಿ ಮೀಸಲಿದೆ. ಈದರಲ್ಲಿ ನಮ್ಮ ಸಮಾಜಕ್ಕೆ 15 ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ನೀಡಬೇಕು ಜತೆಗೆ ಆ ಜಾಗೆಯ ಸುತ್ತಲು ಕಂಪೌಂಡ್ ನಿರ್ಮಿಸಿಕೊಡಬೇಕು ಅದಲ್ಲದೇ ಸ್ಮಶಾನಕ್ಕೆ ನೀಡಿದ ಬಗ್ಗೆ ಉತಾರ ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ಪತ್ತಾರ ತಾರನಾಳ, ಯುವ ಘಟಕದ ತಾಲ್ಲೂಕು ಉಪಾಧ್ಯಕ್ಷ ಮುತ್ತು ಬಡಿಗೇರ, ಮುಖಂಡ ವಿಜಯಕುಮಾರ ಬಡಿಗೇರ, ಮಲ್ಲಪ್ಪ ಬಡಿಗೇರ, ರವಿ ಬಡಿಗೇರ, ಪ್ರಭು ಬಡಿಗೇರ, ಎಂ.ಕೆ ಬಡಿಗೇರ, ಕಾಂತು ತಮದಡ್ಡಿ, ಮೌನೇಶ ಬಡಿಗೇರ ಢವಳಗಿ ಸಿ.ಕೆ ಬಡಿಗೇರ, ಎಂ.ಕೆ ಬಡಿಗೇರ, ಸಿ.ಎಂ ಪತ್ತಾರ ಸೇರಿದಂತೆ ಇನ್ನಿತರರಿದ್ದರು.

Related