ಅತ್ಯಾಧುನಿಕ ಕೂಲಿಂಗ್ ಕಾರ್ಟ್ ಸಿದ್ಧಪಡಿಸಿದ ಟ್ರೇನ್ ಟೆಕ್ನಾಲಜೀಸ್

ಅತ್ಯಾಧುನಿಕ ಕೂಲಿಂಗ್ ಕಾರ್ಟ್ ಸಿದ್ಧಪಡಿಸಿದ ಟ್ರೇನ್ ಟೆಕ್ನಾಲಜೀಸ್

ಅತ್ಯಾಧುನಿಕ “ಕೂಲಿಂಗ್ ಕಾರ್ಟ್” ಸಿದ್ಧಪಡಿಸಿದ ಟ್ರೇನ್ ಟೆಕ್ನಾಲಜೀಸ

ಆಹಾರ ವ್ಯರ್ಥವಾಗುವುದನ್ನು ತಪ್ಪಿಸಲು ಮತ್ತು ಬೀದಿ ಬದಿ ಹಣ್ಣು- ತರಕಾರಿ ವ್ಯಾಪಾರಿಗಳ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಒಂದು ಹಂತದ ಆವಿಷ್ಕಾರ ಮಾರುಕಟ್ಟೆ ಪ್ರದೇಶದಲ್ಲಿ ಶೇ.೨೫ರಷ್ಟು ಆಹಾರದ ಪೋಲಾಗುವಿಕೆಯನ್ನು ತಡೆಯುವ ಪರಿಹಾರ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು , ಟ್ರೇನ್ ಟೆಕ್ನಾಲಜೀಸ್ ನ ಉಪಾಧ್ಯಕ್ಷ , ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ ಜನರಲ್ ಮ್ಯಾನೇಜರ್ ವಿಲ್ಸನ್ ಲಾರೆನ್ಸ್ ತಿಳಿಸಿದರು.

ಟ್ರೇನ್ ಟೆಕ್ನಾಲಜೀಸ್‌ನ ಇಂಡಿಯಾ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸೆಂಟರ್‌ನ ಉಪಾಧ್ಯಕ್ಷರು ಹಾಗೂ ಜನರಲ್ ಮ್ಯಾನೇಜರ್ ಆಗಿರುವ ವಿಲ್ಸನ್ ಲಾರೆನ್ಸ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಕೃಷಿ ಆರ್ಥಿಕತೆ ಆಧರಿಸಿರುವ ದೇಶವಾಗಿರುವ ಭಾರತ, ಮಿತಿ ಮೀರಿದ ಆಹಾರದ ನಷ್ಟ ಮತ್ತು ಪೋಲಾಗುವಿಕೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಹಸಿವು ಹಾಗೂ ಅತಿಯಾದ ಆಹಾರ ನಷ್ಟ ಮತ್ತು ಪೋಲಾಗುವಿಕೆಯ ಈ ವ್ಯತಿರಿಕ್ತ ಸಂದರ್ಭವನ್ನು ಗಮನದಲ್ಲಿರಿಸಿಕೊಂಡು ನಾವು, ನಮ್ಮ ಆಪರೇಷನ್ ಪಾಸಿಬಲ್‌ನ ಮೊದಲ ಸವಾಲಾಗಿ ಕೂಲಿಂಗ್ ಕಾರ್ಟ್ ಅನ್ನು ಸಿದ್ಧಪಡಿಸಿದ್ದೇವೆ. ಹೆಚ್ಚಿನ ಸಂಖ್ಯೆಯ ಜನರಿಗೆ ಅಗತ್ಯವಿರುವ ಮತ್ತು ಅರ್ಹವಾದ ಜೀವನ-ಪೋಷಣೆಯನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಪರಿಹಾರಗಳು ಮತ್ತು ಮಾರ್ಗಗಳನ್ನು ಕಂಡುಕೊಳ್ಳಲು ನಾವು ನಮ್ಮ ಸಾಮೂಹಿಕ ಬುದ್ಧಿಮತ್ತೆ, ಹಲವು ವರ್ಷಗಳ ಅನುಭವ ಮತ್ತು ನಮ್ಮ ಉತ್ಸಾಹವನ್ನು ಬಳಸಿಕೊಂಡು ನಮ್ಮ ಕೈಲಾದ ಪ್ರಯತ್ನ, ಕಾರ್ಯ ಮಾಡುತ್ತಿದ್ದೇವೆ. ಇದರೊಂದಿಗೆ ನಮ್ಮ ಭೂಮಂಡಲದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ತಗ್ಗಿಸುವ ಪ್ರಯತ್ನ ಕೂಡ ನಮ್ಮದಾಗಿದೆ,” ಎಂದು ಹೇಳಿದರು.

ಕೈಗೆಟುಕುವಿಕೆ ಮತ್ತು ಸುಲಭ ಬಳಕೆ ಲಕ್ಷಣಗಳು ಈ ವಿನೂತನ ಆವಿಷ್ಕಾರದ ಪ್ರಮುಖ ಅಂಶಗಳಾಗಿವೆ.

ಅಲ್ಲದೆ, ಈ ವೇಳೆ ತರಕಾರಿ, ಹಣ್ಣುಗಳ ತೂಕ ಕೂಡ ಕಡಿಮೆ ಆಗುವುದಿಲ್ಲ. ಇದರಿಂದಾಗಿ ಬೀದಿ ಬದಿ ವ್ಯಾಪಾರಿಗಳು ಹಣ್ಣು, ತರಕಾರಿ ಕೆಟ್ಟಿದೆ ಎಂದು ಬಿಸಾಡುವ ಪರಿಸ್ಥಿತಿ ಬದಲಾಗಿ, ಉತ್ತಮವಾಗಿರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಹೆಚ್ಚು ಆದಾಯ ಗಳಿಸಬಹುದಾಗಿದೆ.

ಹಾಗೆಯೇಪ್ರಸ್ತುತ ಕೋಲಾರ ನಗರಪಾಲಿಕೆ ಸಹಕಾರದೊಂದಿಗೆ ಈಗಾಗಲೇ ಆರಂಭವಾಗಿರುವ ಪ್ರಾಯೋಗಿಕ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಯಂತ್ರದ ವೈಶಿಷ್ಟ್ಯ

ಕೂಲಿಂಗ್ ಕಾರ್ಟ್ ವ್ಯವಸ್ಥೆಯು ರಾತ್ರಿಯಿಡಿ ಹಣ್ಣು, ತರಕಾರಿ ಸಂಗ್ರಹಿಸಿ ಇರಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ಹಣ್ಣು, ತರಕಾರಿಗಳ ಬಾಳಿಕೆ ಅವಧಿ ೧ರಿಂದ ೨ ದಿನ ವಿಸ್ತರಣೆಯಾಗುತ್ತದೆ. ಕೂಲಿಂಗ್ ಕಾರ್ಟ್, ಮರು ಜೋಡಣೆ ಮಾಡಬಹುದಾದ ಮೇಲ್ಚಾವಣಿ ಅಥವಾ ಕೆನೋಪಿಯನ್ನು ಹೊಂದಿದ್ದು, ಇದು ಇತ್ತೀಚಿನ ಪ್ಯಾಸಿವ್ ಕೂಲಿಂಗ್ ತಂತ್ರಜ್ಞಾನದ ಪ್ರಯೋಜನವನ್ನು ಒದಗಿಸುತ್ತದೆ.

ಕೂಲಿಂಗ್ ಕಾರ್ಟ್ನಲ್ಲಿ ಬಳಸಲಾಗುವ ಕೆನೋಪಿಯು ಪ್ರತಿಫಲಿತ ಫಿಲ್ಮ್ ಅನ್ನು ಹೋಲುವ ನವೀನ ವಿಕಿರಣ ಕೂಲಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಅತ್ಯಂತ ಹಗುರವಾದ ಮತ್ತು ಸಂಪೂರ್ಣವಾಗಿ ನಿಷ್ಕ್ರಿಯ ಸ್ವಭಾವ ಹೊಂದಿದೆ. ಕಾರ್ಯನಿರ್ವಹಿಸಲು ವಿದ್ಯುತ್ ಅಥವಾ ಇನ್ನಾವುದೇ ಇಂಧನ ಬೇಕಾಗುವುದಿಲ್ಲ. ಕೆನೋಪಿಯು ಯಾಂತ್ರಿಕ ವ್ಯವಸ್ಥೆಯನ್ನು ಒಳಗೊಂಡಿರಲಿದ್ದು, ಅದು ವ್ಯಾಪರಿಗಳು ತಮಗೆ ಅನುಕೂಲವಾಗುವಂತೆ ಎತ್ತರವನ್ನು ಹೊಂದಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕೂಲಿಂಗ್ ಕಾರ್ಟ್ನಿಂದ ಈ ಕೆನೋಪಿಯನ್ನು ಸಂಪೂರ್ಣವಾಗಿ ಬೇರ್ಪಡಿಸಬಹುದು ಮತ್ತು ರಾತ್ರಿ ವೇಳೆ ಇದನ್ನು ಶೇಖರಣಾ ಕಂಟೇನರ್ ರೀತಿ ಬಳಸಬಹುದಾಗಿದ್ದು, ಇದರಿಂದ ಶೇಖರಣಾ ಸಾಮರ್ಥ್ಯ ದ್ವಿಗುಣವಾಗುತ್ತದೆ. ಇದು 10 ಡಿಗ್ರಿ ಸೆಲ್ಸಿಯಸ್ ತಾಪಮಾನದ ವ್ಯತ್ಯಾಸವನ್ನು ಒದಗಿಸಬಲ್ಲದು.

ಈ ಸಂದರ್ಭದಲ್ಲಿ ಟ್ರೇನ್ ಟೆಕ್ನಾಲಜೀಸ್‌ನ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರಾಗಿರುವ ಶಿರಿನ್ ಸಾಲಿಸ್,‌ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿಇಒ ನಿತಿನ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Related