ಫ್ಯಾಕ್ಟರಿ, ಬಾಯ್ಲರ್ ಇಲಾಖೆ ಮೇಲೆ ಎಸಿಬಿ ದಾಳಿ

ಫ್ಯಾಕ್ಟರಿ, ಬಾಯ್ಲರ್ ಇಲಾಖೆ ಮೇಲೆ ಎಸಿಬಿ ದಾಳಿ

ದಾವಣಗೆರೆ : ದಾವಣಗೆರೆ ವಿಭಾಗದ ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಕೆ.ಎಂ. ಪ್ರಥಮ್ ಅವರ ಬಳಿ 2.68 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿಗಳು ಎಸಿಬಿ ದಾಳಿಯ ವೇಳೆ ಪತ್ತೆಯಾಗಿವೆ.

ಬೆಂಗಳೂರಿನ ಸಂಜಯ್ ನಗರದ ಒಂದು ವಾಸದ ಮನೆ, ಒಂದು ಭವ್ಯ ಬಂಗಲೆ ಹಾಗೂ ಪ್ರಥಮ್ ಅವರ ತಾಯಿಗೆ ಸೇರಿದ ವಾಸದ ಮನೆ, ದಾವಣಗೆರೆಯ ನಗರದ ಪಿ.ಬಿ ರಸ್ತೆಯ ಹಳೆ ಅಪೂರ್ವ ಹೋಟೆಲ್ ಹಿಂಭಾಗ ಇರುವ ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆಯ ಮೇಲೂ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಲಾಯಿತು.

ಬೆಂಗಳೂರಿನ ಸಂಜಯ ನಗರದ ಎನ್.ಎಸ್ ಹಳ್ಳಿಯಲ್ಲಿ 55 ಲಕ್ಷದ ರೂ. ಮೌಲ್ಯದ ಎರಡು ನಿವೇಶನಗಳು, ಇದೇ ನಿವೇಶನದಲ್ಲಿ ಕಟ್ಟಿರುವ 1.30 ಕೋಟಿ ರೂ. ಮೌಲ್ಯದ ಒಂದು ಬಂಗಲೆ ಹಾಗೂ ಸಂಜಯ ನಗರದಲ್ಲಿ ತಾಯಿ ಪೊನ್ನಮ್ಮ ಹೆಸರಿನಲ್ಲಿರುವ 20 ಲಕ್ಷ ರೂ. ಮೌಲ್ಯದ ವಾಸದ ಮನೆ ಸೇರಿ 2.05 ಕೋಟಿ ರೂ. ಮೌಲ್ಯದ ಆಸ್ತಿಗಳು ಎಸಿಬಿ ದಾಳಿ ವೇಳೆ ಪತ್ತೆಯಾಗಿವೆ.

ಈ ಸಂದರ್ಭದಲ್ಲಿ ದಾವಣಗೆರೆಯ ಎಸಿಬಿ ಎಸ್.ಪಿ ಜಯಪ್ರಕಾಶ್ ನೇತೃತ್ವದಲ್ಲಿ ಹಾವೇರಿ ಡಿಎಸ್‌ಪಿ ಜೆ.ಲೋಕೇಶ್, ಚಿತ್ರದುರ್ಗ ಡಿಎಸ್‌ಪಿ ಬಸವರಾಜ್ ಮಗದುಮ್, ದಾವಣಗೆರೆ ಡಿಎಸ್‌ಪಿ ಸುಧೀರ್, ಇನ್‌ಸ್ಪೆಕ್ಟರ್‌ಗಳಾದ ಮಧುಸೂಧನ್, ರವೀಂದ್ರ, ಕುರುಬಗಟ್ಟಿ, ಪ್ರಭಾವತಿ, ಆಂಜನೇಯ, ಪ್ರವೀಣ್‌ಕುಮಾರ್ ಪಾಲ್ಗೊಂಡಿದ್ದರು.

Related