Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನೆಟ್ಟಗಿಡ ಇನ್ನೊಂದು ಜೀವಕ್ಕೆ ಆಧಾರವಾಗಬೇಕು: ತಿಮ್ಮಕ್ಕ
  • Bangalore
  • State

ನೆಟ್ಟಗಿಡ ಇನ್ನೊಂದು ಜೀವಕ್ಕೆ ಆಧಾರವಾಗಬೇಕು: ತಿಮ್ಮಕ್ಕ

admin June 18, 2025 1 minute read
Spread the love

ಬೆಂಗಳೂರು: ನಗರದ ಕೆಂಪೇಗೌಡ ಬಡಾವಣೆಯ 7ನೇ ಹಂತದಲ್ಲಿ ಸಾಲು ಸರ್ಕಾರದ ವತಿಯಿಂದ ಸಾಲುಮರದ ತಿಮ್ಮಕ್ಕನಿಗೆ ನೀಡಿರುವ ಉಚಿತ ನಿವೇಶನಕ್ಕೆ ಇಂದು ಸಾಲುಮರದ ತಿಮ್ಮಕ್ಕ ಹೊಸ ಮನೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹುದಿನಗಳ ಬೇಡಿಕೆಯಾಗಿದ್ದ ನಿವೇಶನ ದೊರೆತಿರುವುದು ತುಂಬಾ ಖುಷಿ ತಂದಿದ್ದು ಇದರಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ನಿವೇಶನ ದೊರೆಯಲು ಕಾರಣಕರ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

7ನೇ ಹಂತದ ಕೆಂಪೇಗೌಡ ಬಡಾವಣೆಯ ಎಲ್ಲಾ ರಸ್ತೆಗಳಲ್ಲೂ ಹಾಗೂ ರಿಂಗ್ ರಸ್ತೆಯಲ್ಲೂ ಲಕ್ಷಾಂತರ ಗಿಡ ನೆಡುವ ಕಾರ್ಯಕ್ರಮಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಈ ಪ್ರದೇಶವನ್ನು ಹಸಿರುಮಯಗೊಳಿಸಲು ಸತತ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ: ಸಿಎಂ

ಈ ನಿಟ್ಟಿನಲ್ಲಿ ಬಡಾವಣೆಯ ನಿವೇಶನದಾರರು ಮನೆಯ ಮಾಲೀಕರುಗಳು ಬಡಾವಣೆಗೆ ಸಂಬಂಧಪಟ್ಟಂತ ವ್ಯಕ್ತಿಗಳು ಸರ್ಕಾರ ಹೆಚ್ಚಿನ ರೀತಿ ಸಹಕಾರ ನೀಡಿ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.

ಕೆಂಪೇಗೌಡ ಬಡಾವಣೆಯು ನಗರದ ಎಲ್ಲಾ ಬಡಾವಣೆಗಳಿಗಿಂತ ಭಿನ್ನವಾಗಿ ಕಾಣಲು ಗಿಡ ನೆಟ್ಟು ಪೋಷಿಸಿ ಬೆಳಸಿ ಇದೊಂದು ವಿಶ್ವ ಮಟ್ಟಕ್ಕೆ ಮಾದರಿಯಾಗುವಂತೆ ಮಾಡಲು ಪ್ರಯತ್ನಪಡುತ್ತೇವೆ ಹಾಗೂ ಅಲ್ಲಿನ ನಾಗರಿಕರು ಮನೆಗೊಂದು ಗಿಡ, ನಿವೇಶನಗೊಂದು ಗಿಡ ಎಂಬಂತೆ ನಮ್ಮ ಜೊತೆ ಕೈಜೋಡಿಸಿ ಸಹಕರಿಸಿ ಎಂದರು.

ನಾವು ನೆಡುವ ಗಿಡಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುವಂತಹ ಗಿಡಮರಗಳನ್ನು ನೆಟ್ಟು ಪೋಷಿಸುವ ಬೆಳೆಸುವ ಪ್ರಯತ್ನ ಪಡಲಾಗುತ್ತದೆ ನೆಟ್ಟಗಿಡ ಇನ್ನೊಂದು ಜೀವಕ್ಕೆ ಆಧಾರವಾಗಬೇಕು ಸುಮ್ಮನೆ ವ್ಯರ್ಥ ಪ್ರಯೋಜನಕ್ಕೆ ಬಾರದ ಗಿಡಗಳನ್ನು ನೆಡುವುದಿಲ್ಲ ಎಂದರು.

 

About the Author

admin

Administrator

Visit Website View All Posts

Spread the love

Post navigation

Previous: ಕಾಕಾ ಸಾಹೇಬ್ ಪಾಟೀಲರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ: ಡಿಸಿಎಂ
Next: ರಾಜ್ಯ ಸರ್ಕಾರದಿಂದ ಬಿಸಿ ಊಟ ತಯಾರಕರಿಗೆ ಸಿಹಿ ಸುದ್ದಿ!

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.