ಹೆತ್ತವಳಿಗೆ ಬೇಡವಾದ ಮಗು

ಹೆತ್ತವಳಿಗೆ ಬೇಡವಾದ ಮಗು

ಲಕ್ನೋ, ಮಾ. 10 : ಮಗು ಹುಟ್ಟಿದ ಕೆಲವೇ ಗಂಟೆಯಲ್ಲಿ ರಸ್ತೆಯಲ್ಲಿ ಬಿಟ್ಟು ಹೋಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮಹಾತಾಯಿಗೆ ಕರುಳ ಬಳ್ಳಿಯೇ ಭಾರವಾಗಿದೆ. ಗರ್ಭಿಣಿಯನ್ನು ಕಾನ್ಪುರದ ಜಿಲ್ಲಾ ಡಫರಿನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ನಂತ್ರ ಮಹಿಳೆಗೆ ಹೆರಿಗೆಯಾಗಿ ಆರೋಗ್ಯವಂತ ಗಂಡು ಮಗು ಜನಿಸಿತ್ತು. ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಆಸ್ಪತ್ರೆ ಸಿಬ್ಬಂದಿಗೆ ತಿಳಿಸದೆ ಆಸ್ಪತ್ರೆಯಿಂದ ಹೊರ ಬಂದ ಮಹಿಳೆ ಮಗುವನ್ನು ದಾರಿಯಲ್ಲಿ ಬಿಟ್ಟು ಹೋಗಿದ್ದಾಳೆ.
ರಸ್ತೆ ಬಳಿ ಮಲಗಿದ್ದ ಮಗುವಿನ ಅಳು ಕೇಳಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಮಗುವನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಮಹಿಳೆ ಹುಡುಕಾಟ ಶುರು ಮಾಡಿದ್ದಾರೆ.

Related