ಮುದ್ದಿನ ಗಿಣಿಗಾಗಿ ಕಣ್ಣೀರಿಡುತ್ತಿರುವ ಕುಟುಂಬ..

  • In State
  • July 19, 2022
  • 321 Views
ಮುದ್ದಿನ ಗಿಣಿಗಾಗಿ ಕಣ್ಣೀರಿಡುತ್ತಿರುವ ಕುಟುಂಬ..

ತುಮಕೂರು, ಜು 19 : ಕೆಲವರಿಗೆ ಸಾಕು ಪ್ರಾಣಿ-ಪಕ್ಷಿಗಳು ತಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿರುತ್ತವೆ. ತಮ್ಮಿಷ್ಟದ ಜೀವಿಗಳು ಕಣ್ಣ ಮುಂದೆ ಒಂದು ಕ್ಷಣ ಇಲ್ಲದಿದ್ದರೆ ಏನೋ ಕಳೆದುಕೊಂಡ ಭಾವನೆ ಕಾಡುತ್ತಿರುತ್ತದೆ. ಅಂತಹುದರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾದರೆ, ಅದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ.

ಇದೀಗ ಇಂಥದ್ದೇ ನೋವಿನಲ್ಲಿ ತುಮಕೂರಿನ ಕುಟುಂಬವೊಂದು ಇದೆ. ಅದಕ್ಕೆ ಕಾರಣ ಅವರ ಪ್ರೀತಿಯ ಗಿಣಿ ಕಾಣೆಯಾಗಿರುವುದು. ತುಮಕೂರಿನ ಜಯನಗರದ ನಿವಾಸಿ ರವಿ ಕುಟುಂಬ ಗಿಣಿ ಕಳೆದುಕೊಂಡ ದುಃಖದಲ್ಲಿದೆ. ಅಲ್ಲದೆ, ಗಿಣಿ ಪತ್ತೆ ಮಾಡಿಕೊಟ್ಟವರಿಗೆ ೫೦ ಸಾವಿರ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿದೆ.

ರವಿ ಕುಟುಂಬ ಸಾಕಿದ್ದ ಆಫ್ರಿಕನ್ ಗ್ರೇ ಜಾತಿಯ ಗಿಣಿ ಇದೇ ೧೬ರಂದು ತಮ್ಮ ಮನೆಯಿಂದ ನಾಪತ್ತೆಯಾಗಿದೆ. ಪ್ರೀತಿಯ ಗಿಣಿ ಕಾಣೆಯಾಗಿರುವುದಕ್ಕೆ ರವಿ ಕುಟುಂಬ ಕಣ್ಣೀರಿಡುತ್ತಿದೆ. ಗಿಣಿಗೆ ರುಸ್ತುಮಾ ಎಂಬ ಹೆಸರಿಟ್ಟು ಮನೆಯಲ್ಲಿ ತುಂಬಾ ಮುದ್ದಾಗಿ ಸಾಕಿಕೊಂಡಿದ್ದರು.

Related