ಮಾನವಿಯತೆಗೆ ಸಾಕ್ಷಿಯಾದ ಪಂಚಾಯತ್ ಸದಸ್ಯ

  • In State
  • March 29, 2020
  • 466 Views
ಮಾನವಿಯತೆಗೆ ಸಾಕ್ಷಿಯಾದ ಪಂಚಾಯತ್ ಸದಸ್ಯ

ಬೆಳಗಾವಿ, ಮಾ. 29: ರಾಷ್ಟ್ರಾದ್ಯಂತ ಭೀಕರ ಕೊರೊನಾ ವೈರಸ್ ಹಬ್ಬಿದ ಹಿನ್ನೆಲೆಯಲ್ಲಿ ಎಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅದೆಷ್ಟೋ ಕೂಲಿ ಕಾರ್ಮಿಕರು ಮಾಹಾಮಾರಿ ಕೊರೊನಾಗೆ ಹೇದರಿ  ಗೃಹ ಬಂದಿಯಾಗಿವೆ. ಇತ್ತ ಕೆಲಸವು ಇಲ್ಲದೆ ಹೋರಗೆ ಸಂಚಾರಕ್ಕೆ ಅವಕಾಶವು ಇಲ್ಲದೆ ದಿನನಿತ್ಯ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣ ಆಗಿದೆ ದಿನಸಿ ವಸ್ತುಗಳ ಅವಶ್ಯಕತೆ ಇಂದ ಬಳಲುತ್ತಿರುವ ಜನರಿಗೆ ಸಹಾಯ ಹಸ್ತ ಚಾಚುತ್ತಿರುವರೆ ದೀಲಿಪ ಕಾಂಬಳೆ.

ಹೌದು, ಬೆಳಗಾವಿ ಜಿಲ್ಲೆಯ ಅಥಣಿ  ತಾಲ್ಲೂಕು  ಪಂಚಾಯತ್ ಸದಸ್ಯ ದಿಲೀಪ್ ಹಲವಾರು ಬಡ ಕುಟುಂಬಗಳ ಮನೆಮನೆಗೆ ತೆರಳಿ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಜನರ ಕಷ್ಟಕಾಲದಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿರುವದು ನಿಜಕ್ಕೂ ಬಡಕುಟುಂಬಗಳಿಗೆ ಆಶಾಧಾಯಕವಾಗಿದೆ ಎಂದು ‌ವೃದ್ದೆ ರತ್ನವ್ವಾ  ಹೇಳುತ್ತಾರೆ.

ಇದೆ ಸಂದರ್ಭದಲ್ಲಿ ಮಾತನಾಡಿದ ತಾಪಂ ಸದಸ್ಯ ದಿಲೀಪ ಕಾಂಬಳೆ, ಮಹಾಮಾರಿ ಕೊರೊನಾ ವೈರಸ್ ಅತ್ಯಂತ ಗಂಭೀರ ವೈರಸ್ ಆಗಿದ್ದು, ಯಾರೂ ಮನೆಬಿಟ್ಟು ಹೊರಗೆ ಬರಬಾರದೆಂದು ಮನವಿ ಮಾಡಿದರು. ಹಾಗೆಯೇ ನಾನು ಬಡಕೂಲಿಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಿದ್ದು ಅತಿ ಕಡುವಡವರು ಮತ್ತು ಸದ್ಯಕ್ಕೆ  ಕೆಲಸವಿಲ್ಲದೆ ಮನೆಯಲ್ಲಿ ಇದ್ದು ಆಹಾರ ಸಮರ್ಪಕವಾಗಿ ಸಿಗದೇ ಇದ್ದುದನ್ನು ಮನಗಂಡು  ನನ್ನ ಕೈಲಾದ ಅಲ್ಪಸಹಾಯ ಮಾಡಿದ್ದೆನೆ ಎಂದು ಹೇಳಿದರು.

 

 

 

Related