ನವದೆಹಲಿ, ಫೆ, 28 : ಹೊಸ ಹೊಸ ಸಾಹಸಕ್ಕೂ ಕೈಹಾಕುತ್ತಾರೆ. ಸಾಹಸ ಕೆಲವೊಮ್ಮೆ ಯಮಲೋಕದ ಬಾಗಿಲು ತಟ್ಟಿ ವಾಪಸ್ ಕರೆದುಕೊಂಡು ಬಂದಿರುವ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. ಇನ್ನೊಂದು ಉದಾಹರಣೆ ಸೇರ್ಪಡೆಯಾಗಿದೆ.
ಜಾಸನ್ ಕ್ಲಾರ್ಕ್ ಎಂಬ ಅಮೆರಿಕದ ಟಿಕ್ಟಾಕ್ ಸ್ಟಾರ್ ವಿಭಿನ್ನತೆ ಮೆರೆಯಲು ಹೋಗಿ ಸಾವಿನ ಕದ ತಟ್ಟಿ ಬಂದಿದ್ದು, ಅದನ್ನು ಸ್ವತಃ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಯುಎಸ್ನ ಉತ್ಸಾಹ ಪ್ರದೇಶದ ಐಸ್ ವಾಟರ್ನಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸವನ್ನು ಮಾಡಿದ್ದಾರೆ. ನಾನೆಂದಿಗೂ ಸಾವನ್ನು ಹತ್ತಿರದಿಂದ ನೋಡಿರಲಿಲ್ಲ. ನನ್ನ ಕಣ್ಣು ಗುಡ್ಡೆಗಳು ಆದಷ್ಟು ಬೇಗ ಹಿಮಗಟ್ಟುತ್ತದೆ ಎಂದೂ ಯೋಚಿಸಿರಲಿಲ್ಲ. ಐಸ್ ವಾಟರ್ಗೂ ಮಂಜುಗೆಡ್ಡೆಯಿಂದ ಆವರಿಸಿದ್ದ ಮೇಲ್ಮೈಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಒಂದು ಕ್ಷಣ ಸಾವಿನ ಬಳಿ ಹೋಗಿ ಬಂದ ಅನುಭವವಾಯಿತು ಎಂದು ಹೇಳಿದ್ದಾರೆ.