ಹೆಬ್ಬಾವುಗಳೊಂದಿಗೆ ಯುವಕನ ಡಾನ್ಸ್..!

  • In WORLD
  • April 30, 2022
  • 499 Views
ಹೆಬ್ಬಾವುಗಳೊಂದಿಗೆ ಯುವಕನ ಡಾನ್ಸ್..!

ಹಾವುಗಳೆಂದರೆ ಜನ ಮಾರು ದೂರ ಓಡುವುದೇ ಹೆಚ್ಚು. ಆದರೆ ಇಲ್ಲೊಂದು ವ್ಯಕ್ತಿ ಎರಡು ಬರೋಬರಿ ಗಾತ್ರದ ಎರಡು ಹೆಬ್ಬಾವುಗಳನ್ನು ಹೆಗಲ ಮೇಳೆ ಹಾಕಿಕೊಂಡು ಡಾನ್ಸ್ ಮಾಡುತ್ತಿದ್ದು, ನೋಡುಗರಿಗೆ ಭಯ ಹಿಟ್ಟಿಸುವಂತಿದೆ. ಈತ ಹಾವುಗಳೊಂದಿಗೆ ಸರಸವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆಬ್ಬಾವುಗಳು ವಿಷ ಇಲ್ಲದ ಹಾವುಗಲಾಗಿದ್ದರೂ, ಬೃಹತ್ ಗಾತ್ರವಿರುವ ಕಾರಣ ಅವುಗಳು ಮನುಷ್ಯರನ್ನು ಕಚ್ಚಿ ನುಂಗಬಲ್ಲವು. ವಿಶ್ವ ಉದ್ದದ ಹಾವುಗಳು ಎಂದು ಕರೆಯಲ್ಪಡುವ ಎರಡು ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಯುವಕನೋರ್ವ ಡಾನ್ಸ್ ಮಾಡುತ್ತಿದ್ದಾನೆ. ಹೆಬ್ಬಾವುಗಳನ್ನು 20 ಅಡಿಗಳಿಗಿಂತ ಹೆಚ್ಚು ಉದ್ದಕ್ಕೆ ಬೆಳೆಯುತ್ತವೆ. ಅಂತಹ ಹಾವುಗಳೊಂದಿಗೆ ಡಾನ್ಸ್ ಮಾಡುತ್ತಿರುವ ವ್ಯಕ್ತಿ ಇಂಡೋನೇಷಿಯಾದವನಾಗಿದ್ದು, ಈತ ತನ್ನ  ಇನ್ ಸ್ಟಾಗ್ರಾಮ್ ನಲ್ಲಿ ಎರಡು ಬೃಹತ್  ರೆಟಿಕ್ಯುಲೇಟೆಡ್ ಹೆಬ್ಬಾವುಗಳೊಂದಿಗೆ ಅಗಾಗ್ಗೆ ರೀಲ್ಸ್ ಗಳನ್ನು ಮಾಡಿ ಪೋಸ್ಟ್ ಮಾಡುವುದನ್ನು ವೀಡಿಯೋ ತೋರಿಸುತ್ತದೆ.

Related