ಒಂದು ತಂಡದಲ್ಲಿ 15 ಆಟಗಾರರಿಗೆ ಮಾತ್ರ ಅವಕಾಶ ಐಸಿಸಿ

  • In Sports
  • August 14, 2021
  • 348 Views
ಒಂದು ತಂಡದಲ್ಲಿ 15 ಆಟಗಾರರಿಗೆ ಮಾತ್ರ ಅವಕಾಶ ಐಸಿಸಿ

ದುಬೈ: ಐಸಿಸಿ ಟಿ 20 ವಿಶ್ವಕಪ್ ಕೂಟಕ್ಕೆ ಇನ್ನು ಎರಡು ತಿಂಗಳು ಬಾಕಿಯಿದೆ. ಈಗಾಗಲೇ ಇದರ ಸಿದ್ಧತೆ ನಡೆಸುತ್ತಿದೆ. ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಒಂದು ತಂಡದಲ್ಲಿ 15 ಮಂದಿ ಆಟಗಾರರು ಮತ್ತು ಎಂಟು ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ . ಈ ಬಗ್ಗೆ ಕ್ರಿಕೆಟ್ ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ಸೆಪ್ಟೆಂಬರ್ 10 ರೊಳಗೆ ಭಾಗವಹಿಸುವ ತಂಡಗಳು ತಮ್ಮ 15 ಆಟಗಾರರ ಪಟ್ಟಿ ಮತ್ತು ಕೋಚ್, ಸಹಾಯಕ ಸಿಬ್ಬಂದಿ ಸೇರಿ ಎಂಟು ಅಧಿಕಾರಿಗಳ ಪಟ್ಟಿಯನ್ನು ನೀಡಬೇಕು ಎಂದು ಶನಿವಾರ ಐಸಿಸಿ ಸೂಚಿಸಿದೆ. ಒಂದು ತಂಡದಲ್ಲಿ ಕೇವಲ 15 ಆಟಗಾರರಿಗೆ ಮಾತ್ರ ಐಸಿಸಿ ಖರ್ಚು ಒದಗಿಸುತ್ತದೆ. ಒಂದು ವೇಳೆ ಹೆಚ್ಚುವರಿ ಆಟಗಾರರಿದ್ದರೆ ಅವರ ಖರ್ಚನ್ನು ಆ ದೇಶವೇ ಭರಿಸಬೇಕು ಎಂದು ಸೂಚಿಸಿದೆ. ಕಳೆದ ವರ್ಷ ಭಾರತದಲ್ಲಿ ನಡೆಯಬೇಕಿದ್ದ ಈ ಕೂಟ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಈ ಬಾರಿ ಯುಎಇ ಮತ್ತು ಒಮಾನ್ ನಲ್ಲಿ ಬಿಸಿಸಿಐ ನ ಪ್ರಾಯೋಜತ್ವದಲ್ಲಿ ನಡೆಯುತ್ತಿದೆ.

Related