25 ಜನ ಪತ್ರಕರ್ತರಿಗೆ ಕೊರೊನಾ ಸೋಂಕು

25 ಜನ ಪತ್ರಕರ್ತರಿಗೆ ಕೊರೊನಾ ಸೋಂಕು

ಮುಂಬೈ : ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಮಾರ್ಚ್ 24 ರಾತ್ರಿಯಿಂದಲೇ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಲಾಗಿದೆ. ಲಾಕ್‌ಡೌನ್ ಪ್ರತಿ ಕ್ಷಣದ ಮಾಹಿತಿಗೆ ಪತ್ರಕರ್ತರು ರಸ್ತೆಗಿಳಿದು ಶ್ರಮಿಸಿದ್ದಾರೆ, ಹೀಗಿರುವಾಗಲೇ ಮುಂಬೈನಲ್ಲಿ 25 ಜನ ಪತ್ರಕರ್ತರಿಗೆ ಸೋಂಕು ಕಾಣಿಸಿಕೊಂಡು ಭೀತಿ ಹುಟ್ಟಿಸಿದೆ.

ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ವೈದ್ಯಕೀಯ ತಪಾಸಣೆಯಲ್ಲಿ 25 ಜನರಿಗೆ ಕೊರೊನಾ ಸೋಂಕು ಇರುವುದು ಧೃಡವಾಗಿದೆ.

ರಿಪೋರ್ಟ್‌ರ್, ಕ್ಯಾಮೆರಾಮನ್‌ಗಳಿಗೆ ಹೆಚ್ಚಿನ ಸೋಂಕು ಪತ್ತೆ

ಇನ್ನು ಸೋಂಕು ಪತ್ತೆಯಾದ 25 ಜನ ಪತ್ರಕರ್ತರಲ್ಲಿ ಅತಿ ಹೆಚ್ಚು ಜನ ರಿಪೋರ್ಟ್‌ರ್ ಹಾಗು ಕ್ಯಾಮೆರಾಮನ್‌ಗಳಿದ್ದಾರೆ. ಸದಾ ಜನರ ಜೊತೆ ಬೆರೆಯುವ ರಿಪೋರ್ಟ್‌ರ್ ಹಾಗು ಕ್ಯಾಮೆರಾಮನ್‌ಗಳಿಗೆ ಹೊರಗಡೆಯಿಂದ ಸೋಂಕು ಹರಡಿರುವ ಬಗ್ಗೆ ಪತ್ತೆಯಾಗಿದೆ. ಈಗಾಗಲೇ ಸೋಂಕು ಕಾಣಿಸಿಕೊಂಡವರನ್ನ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಧ್ಯಮ ಪ್ರತಿನಿಧಿಗಳು ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ ಮತ್ತು ಮುಂಜಾಗೃತ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಲಾಗಿದೆ.

Related