ನಾಡ ಹಬ್ಬ ದಸರಾದ ಸಂಭ್ರಮಾಚರಣೆ

ನಾಡ ಹಬ್ಬ ದಸರಾದ ಸಂಭ್ರಮಾಚರಣೆ

ಔರಾದ್:  ರಾಜ್ಯದ ನಾಡ ಹಬ್ಬ. ಹಿಂದೂ ಧರ್ಮದವರಿಗೆ ಇದೊಂದು ಪ್ರಮುಖ ಹಬ್ಬ. ವಿಜಯ ದಶಮಿಯನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೆಮ್ಮಾರಿ ಕೋವಿಡ್ ಆತಂಕ, ನೆರೆ ಪರಿಸ್ಥಿತಿ ನಡುವೆಯೂ ಹಬ್ಬವನ್ನು ಉಲ್ಲಾಸಭರಿತವಾಗಿ ನೆರವೇರಿತು.
ನಗರ ಪಟ್ಟಣ, ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಿತ್ತು. ಗ್ರಾಮಸ್ಥರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನವರಾತ್ರಿಯ ಒಂಬತ್ತು ದಿನಗಳವರೆಗೆ ದೇವಸ್ಥಾನ, ಮನೆಯಲ್ಲಿ ದೇವಿ ಪೂಜೆ, ನಡೆಸಲಾಯಿತು. ಒಂಬತ್ತನೆದಿನ ಆಯುಧ ಪೂಜೆ ಮಾಡಲಾಯಿತು.
ಹಬ್ಬದ ನಿಮಿತ್ತ ವಿಶೇಷವಾಗಿ ಹೋಳಿಗೆ, ಪಾಯಸಾ ಸಿಹಿ ಪದಾರ್ಥಗಳನ್ನು ಕುಟುಂಬ ವರ್ಗ, ಆಪ್ತರೊಂದಿಗೆ ಸವಿಯುವುದು. ಸಾಯಂಕಾಲ ಮಕ್ಕಳು, ಹಿರಿಯರು ಸೇರಿ ಬನ್ನಿ ಮರದ ಪೂಜೆ ಮಾಡಿ ಬನ್ನಿ ಹಂಚಿಕೊಂಡು ಶುಭ ಕೋರಿದರು. ತುಳಜಾಪೂ ಭವಾನಿ ಮಾತಾ ಮಂದಿರದಲ್ಲಿ  ಸಾರ್ವಜನಿಕರು ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಕೋವಿಡ್ ಜತೆಗೆ ಭಾರಿ ಮಳೆಯಿಂದ ರೈತ ಬಾಂಧವರು ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದರು. ಆದರೂ ಹಬ್ಬದ ಸಡಗರ ಏನೂ ಕಡಿಮೆ ಆಗಿರಲಿಲ್ಲ. ಮಕ್ಕಳು, ವಯಸ್ಕರು ಹೊಸ ಬಟ್ಟೆ ತೊಟ್ಟು, ಹೊಲಕ್ಕೆ ತೆರಳಿ ಬನ್ನಿ ತೆಗೆದುಕೊಂಡು, ಮೊದಲು ದೇವರಿಗೆ ಸಮರ್ಪಿಸಿದರು. ಬಳಿಕ ಸಂಬಂಧಿಕರು, ಸ್ನೇಹಿತರಿಗೆ ಬನ್ನಿ ಕೊಟ್ಟು ಹಬ್ಬದ ಸಂಭ್ರಮದ ಹಂಚಿಕೊಂಡರು.

Related