ಅನುಮಾನಕ್ಕೆ ಆಸ್ಪದವಾಗಿರುವ ಅಧಿಕಾರಿಣಿಯ ಸಾವು

ಅನುಮಾನಕ್ಕೆ ಆಸ್ಪದವಾಗಿರುವ ಅಧಿಕಾರಿಣಿಯ ಸಾವು

ಸಿರುಗುಪ್ಪ : ಸದಾಶಿವನಗರದ 22ನೇ ವಿಭಾಗದ ಎರಡನೇ ಮುಖ್ಯ ರಸ್ತೆಯ ಮಾತೃಶ್ರೀ ಹೆಸರಿನ ತಮ್ಮ ಸ್ವಂತ ಮನೆಯಲ್ಲಿನ ನಿವಾಸಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಆರ್.ಶಿವಶಂಕರ್ ಗೌಡರ ಹಿರಿಯ ಪುತ್ರಿ ಚೈತ್ರಾ (29) ಮಂಗಳವಾರ ಅನುಮಾಸಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಳೆದ ಮೂರು ವರ್ಷದ ಹಿಂದೆ ಸಿಂಧನೂರು ತಾಲೂಕು ವಿರುಪಾಪುರ ಗ್ರಾಮದ ಅಮರೇಗೌಡ ಪಾಟೀಲರ ಕೊನೆಯ ತಮ್ಮ ಸಿದ್ದನಗೌಡ ಪಾಟೀಲ್ ಬಾಗಲಕೋಟೆಯ ವೈದ್ಯಕೀಯ ಕಾಲೇಜಿನ ದಂತ ವೈದ್ಯ ಇವರಿಗೆ ವಿವಾಹ ಮಾಡಲಾಗಿತ್ತು.

ಮಕ್ಕಳು ಇನ್ನೂ ಆಗಿರದ ಚೈತ್ರಾರವರಿಗೆ ಕಳೆದ ಮೂರು ತಿಂಗಳ ಹಿಂದೆ ಕೆಪಿಎಸ್‌ಸಿ ನಿಂದ ನೇರವಾಗಿ ಕೊಪ್ಪಳ ನಗರಸಭೆಯ ಕಂದಾಯ ಅಧಿಕಾರಿಯಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದರು. ತನಗೆ ಆರೋಗ್ಯ ಸರಿಯಿಲ್ಲವೆಂದು ತಿಳಿಸಿದ ಕಾರಣ ತವರು ಮನೆಗೆ ಕರೆ ತಂದಿದ್ದರು. ಹಿಂದಿನ ದಿನ ರಾತ್ರಿಯಷ್ಟೇ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿದ್ದರು.

ರಾತ್ರಿ ಸುಮಾರು ಹತ್ತು ಗಂಟೆಯವರೆಗೂ ಮನೆಯವರೆಲ್ಲರೊಂದಿಗಿದ್ದು ಟಿ.ವಿ. ವೀಕ್ಷಿಸಿ ಊಟ ಮಾಡಿ ಕೋಣೆಗೆ ಮಲಗಲು ಹೋಗಿದ್ದಳು. ಬೆಳಿಗ್ಗೆ ಬಹಳ ಹೊತ್ತಾದರೂ ಎದ್ದಿರಲಿಲ್ಲ. ಮತ್ತೆ ಕೆಲ ಸಮಯದ ನಂತರ ಎಬ್ಬಿಸಿದರೂ ಮಾತನಾಡದೆ ಬಾಗಿಲು ಕೂಡಾ ತೆರೆಯದ ಕಾರಣ ಕಿಟಕಿಯಲ್ಲಿ ನೋಡಿದಾಗ ಫ್ಯಾನಿಗೆ ನೇಣು ಹಾಕಿದ್ದ ಮಗಳನ್ನು ಕಂಡು ಕುಟಂಬದವರು ದಿಗ್ಭ್ರಮೆಯಾದವೆಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಆದರೆ ಕಾರಣ ಇದುವರೆಗೂ ತಿಳಿದು ಬಂದಿಲ್ಲ. ಘಟನೆಯ ನಂತರದ ತಡವಾಗಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಆಗಮಿಸುವ ಮುಂಚೆಯೇ ನೇಣಿನಿಂದ ದೇಹವನ್ನು ಕೆಳಗಿಳಿಸಲಾಗಿತ್ತು. ಸುದ್ದಿ ತಿಳಿದ ಆಗಮಿಸಿದ ಪತಿ ಸಿದ್ದನಗೌಡ ಪಾಟೀಲ್ ಆಗಮಿಸಿ ನಂತರ ಮರಣೋತ್ತರ ಪ್ರಕ್ರಿಯೆಗಳು ಪ್ರಾರಂಭವಾದವು.

ಚೈತ್ರಾರವರು ಐಎಎಸ್, ಕೆಎಎಸ್ ಅಧಿಕಾರಿಯಾಗಬೇಕೆಂದು ಮೊದಲಿಂದಲೂ ಕನಸು ಕಂಡಿದ್ದಳು.ಇದಕ್ಕಾಗಿ ಸಾಕಷ್ಟು ಕಷ್ಟಪಟ್ಟು ಅಭ್ಯಾಸ ಕೂಡ ಮಾಡುತ್ತಿದ್ದಳು. ಮನೆಯಲ್ಲಿ ಪೂರಕ ವಾತಾವರಣವೂ ಇತ್ತು. ಆದರೆ ಈ ಯುವ ಮಹಿಳಾ ಅಧಿಕಾರಿ ಈಗ ನೇಣಿಗೆ ಕೊರಳು ನೀಡಿದ್ದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

Related