ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು, ಬಹಿಷ್ಕಾರ

ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು, ಬಹಿಷ್ಕಾರ

ಸಂಡೂರು : ಸಂಡೂರು ಪಟ್ಟಣದಲ್ಲಿ ಅಕ್ಟೊಬರ್ 20ರಂದು ಜರುಗಲಿರುವ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಪೂರ್ವಭಾವಿ ಸಭೆಗೆ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಗೈರಾಗಿದ್ದರಿಂದ ಅಸಮಾಧಾನಗೊಂಡ ವಾಲ್ಮೀಕಿ ಸಮಾಜದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಸೋಮವಾರ ನಡೆಯಿತು.

ಪಟ್ಟಣದ ತಾಲೂಕು ಪಂಚಾಯಿತಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಮಹರ್ಷಿ ವಾಲ್ಮೀಕಿಯವರ ಜಯಂತಿಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಗೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಎಚ್ ಜೆ ರಶ್ಮಿ ಗೈರಾಗಿದ್ದರು ತಮ್ಮ ಪರವಾಗಿ ಡಿಟಿ ಕೆ ಎಂ ಶಿವಕುಮಾರ್ ಸಭೆಗೆ ಕಳುಹಿಸಿದ್ದರು.

ಉಳಿದಂತೆ ತೋಟಗಾರಿಕೆ, ಪಶುಸಂಗೋಪನೆ ಇಲಾಖೆ, ಅಗ್ನಿಶಾಮಕ ದಳ, ಅಲ್ಪಸಂಖ್ಯಾತರ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಬಿಸಿಎಂ, ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ಸಹಾಯಕರನ್ನು ಸಭೆಗೆ ಕಳುಹಿಸಿದ್ದರು. ಕೃಷಿ ಇಲಾಖೆ, ಪಿಆರ್‌ಇಡಿ ,ಆರೋಗ್ಯ, ಉತ್ತರ ಮತ್ತು ದಕ್ಷಿಣ ಅರಣ್ಯ ವಲಯ, ಜೆಸ್ಕಾಂ, ಕೆಆರ್‌ಐಡಿಎಲ್, ಕಾರ್ಮಿಕ, ಮೀನುಗಾರಿಕೆ, ಹಾಲು ಒಕ್ಕೂಟ ಕೆಎಸ್‌ಆರ್‌ಟಿಸಿ, ಖಜಾನೆ ಅಧಿಕಾರಿಗಳು ತಮ್ಮ ಪ್ರತಿನಿಧಿಗಳನ್ನೂ ಸಭೆಗೆ ಕಳುಹಿಸಿರಲಿಲ್ಲ.

ಇದರಿಂದಾಗಿ ಸಿಟ್ಟಾದ ವಾಲ್ಮೀಕಿ ಸಮಾಜದ ಮುಖಂಡರು ಸಭೆ ಬಹಿಷ್ಕರಿಸುವುದಾಗಿ ಹೇಳಿ ಹೊರನಡೆದರು. ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಗೆ ಪ್ರತಿ ವರ್ಷವೂ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತೇವೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಕೈ ತೊಳೆದುಕೊಳ್ಳುವ ಚಾಳಿ ಮುಂದುವರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ತಾಪಂ. ಇಓ. ಪಿ ವಿವೇಕಾನಂದ, ಸಭೆಗೆ ಗೈರಾದವರಿಗೆ ನೋಟಿಸ್ ಜಾರಿ ಮಾಡುತ್ತೇವೆ, ಸಭೆಯನ್ನು ಆ.13 ರಂದು ಬೆಳಗ್ಗೆ ಗಂಟೆಗೆ ಮರು ಆಯೋಜಿಸಲಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಎಸ್ಟಿ ಅಭಿವೃದ್ಧಿ ನಿಗಮದ ಅಧಿಕಾರಿ ರವಿಕುಮಾರ್, ತಾಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಡಿ. ಕೃಷ್ಣಪ್ಪ, ಸಮಾಜದ ಮುಖಂಡರಾದ ಬಿ. ವಸಂತ್ ಕುಮಾರ್, ನವಲಟ್ಟಿಜಯಣ್ಣ, ಕಾಲಿಂಗೇರಿ ಮಲ್ಲಿಕಾರ್ಜುನ್, ಸುಶೀಲಾನಗರದ ಗ್ರಾಪಂ. ಮಾಜಿ ಅಧ್ಯಕ್ಷರಾದ ವಿ.ಅಂಬರೀಶ, ಆರ್. ನಾಗರಾಜ,ಪಕ್ಕಿರಪ್ಪ ನಾಯಕ, ಧನಂಜಯ, ಸಿ.ಎಂ.ಶಿಗ್ಗಾವಿ, ಜೆಬಿಟಿ. ಬಸವರಾಜ, ಸತ್ಯ ನಾರಾಯಣ, ಪುರಸಭೆ ಮಾಜಿ ಸದಸ್ಯ ನಾಗರಾಜ, ಷಣ್ಮುಖಪ್ಪ, ಅರ್, ಬಸವರಾಜ, ಕಮತೂರು ಮಲ್ಲಿಸ್ವಾಮಿ, ಗಂಡಿ ಮಾರೆಪ್ಪ, ರಾಮಘಡ ರಘು, ಜಯಕುಮಾರ್, ಅರ್ ವೆಂಕಟೇಶ್, ರಕ್ಷಣಾ ವೇದಿಕೆ ಅಧ್ಯಕ್ಷ ಹಾಗೂ ಹಾಯ್ ಸಂಡೂರ್ ಪತ್ರಿಕೆಯ ಸಹ ಸಂಪಾದಕರಾದ ಪಿ.ರಾಜು ಪಾಳೇಗಾರ್, ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ. ಪರಶುರಾಮ, ರೈತ ಸಂಘದ ಎಂ ಎಲ್ ಕೆ ನಾಯ್ಡು ಹಾಗೂ ಇತರರಿದ್ದರು.

Related