ಟಿಟಿಡಿ ಸದಸ್ಯರಾಗಿ ಯಲಹಂಕ ಶಾಸಕ

ಟಿಟಿಡಿ ಸದಸ್ಯರಾಗಿ ಯಲಹಂಕ ಶಾಸಕ

ಅಮರಾವತಿ :ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರನ್ನು ಆಂಧ್ರ ಪ್ರದೇಶ ಸರ್ಕಾರ ಬುಧವಾರ ಘೋಷಿಸಿದೆ. ಕರ್ನಾಟಕದಿಂದ ಯಲಹಂಕ ಶಾಸಕ ವಿಶ್ವನಾಥ್ ಮತ್ತು ಶಶಿಧರ್ ಅವರಿಗೂ ಅವಕಾಶ ಕಲ್ಪಿಪಿಸಲಾಗಿದೆ.
ಯಲಹಂಕ ಶಾಸಕ ವಿಶ್ವನಾಥ ಅವರು ಈ ಹಿಂದೆ ಅಮರಾವತಿಯಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರನ್ನು ಭೇಟಿ ಮಾಡಿ ತಿರುಮಲದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೇರಿದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವಂತೆ ಕೇಳಿದರು.
ಒಟ್ಟು ೨೫ ಜನರಿಗೆ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣದವರು ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.

Related