ಫೈನಲ್ ಪ್ರವೇಶಿಸಿದ ಕನ್ನಡಿಗ ಸುಹಾಸ್

  • In Sports
  • September 4, 2021
  • 86 Views
ಫೈನಲ್ ಪ್ರವೇಶಿಸಿದ ಕನ್ನಡಿಗ ಸುಹಾಸ್

ಟೋಕಿಯೊ:ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಕನ್ನಡಿಗ ಸುಹಾಸ್ ಅವರು ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಭಾನುವಾರ ಫ್ರಾನ್ಸ್ ನ ಲೂಕಸ್ ಮಜೂರ್ ವಿರುದ್ಧ ಫೈನಲ್ ಹಣಾಹಣಿ ಕಾದಾಟ ನಡೆಸಲಿದ್ದು, ಪದಕವನ್ನು ಖಚಿತ ಪಡಿಸಿದ್ದಾರೆ.

ಎಲ್.ವೈ.ಸುಹಾಸ್ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು. ಉತ್ತರಪ್ರದೇಶದ ನೋಯ್ಡಾ ಡಿಸಿ ಆಗಿ ಸುಹಾಸ್ ಸೇವೆ ಸಲ್ಲಿಸುತ್ತಿದ್ದಾರೆ. ಶನಿವಾರ ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಸೆಮಿಫೈನಲ್ ಮುಖಾಮುಖಿಯಲ್ಲಿ ಯತಿರಾಜ್, ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು.

Related