ಒಂದೇ ಸಂಖ್ಯೆಯ ಎರಡು ವಾಹನ ವಶ

  • In Crime
  • August 26, 2021
  • 68 Views
ಒಂದೇ ಸಂಖ್ಯೆಯ ಎರಡು ವಾಹನ ವಶ

ಬೆಂಗಳೂರು : ಯಲಹಂಕ ಸಾರಿಗೆ ಇಲಾಖೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ರಾಜ್ ಕುಮಾರ್ ನೇತೃತ್ವದ ತಂಡ ಮತ್ತೊಮ್ಮೆ ಗುರುವಾರ ಕಾರ್ಯಾಚರಣೆ ನಡೆಸಿ, ಒಂದೇ ನೋಂದಣಿ (KA 53 B 3633) ಸಂಖ್ಯೆಯನ್ನು ಬಳಸಿಕೊಂಡು ಸಂಚರಿಸುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಯಲಹಂಕದಲ್ಲಿ ಒಂದು ಸ್ವರಾಜ್ ಮಜ್ದಾ ಬಸ್ಸನ್ನು , ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಅದೇ ನೋಂದಣಿ ಸಂಖ್ಯೆಯನ್ನು ಬಳಸಿ ಸಂಚರಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಂದೇ ಸಂಖ್ಯೆ ಬಳಸಿ ವಾಹನಗಳನ್ನು ಚಲಾಯಿಸುವುದು ಕಾನೂನಿಗೆ ವಿರುದ್ದ. ಇದರ ಬಗ್ಗೆ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ರಾಜ್ ಕುಮಾರ್ ತಿಳಿಸಿದರು.

Related