ಯುವಕನ ಮೇಲೆ ಮೊಸಳೆ ದಾಳಿ

  • In Crime
  • August 23, 2021
  • 61 Views
ಯುವಕನ ಮೇಲೆ ಮೊಸಳೆ ದಾಳಿ

ಸಿರುಗುಪ್ಪ : ತಾಲೂಕಿನ ಉಡೇಗೋಳ ಗ್ರಾಮದ ಹತ್ತಿರದ ತುಂಗಭದ್ರಾ ನದಿಯಲ್ಲಿ ನೀರು ಕುಡಿಯಲು ಹೋಗಿದ್ದ ಮಹಮ್ಮದ್ ಅಜರುದ್ದೀನ್ ಯುವಕನ ಮೇಲೆ ಮೊಸಳೆ ದಾಳಿ ಮಾಡಿರುವ ಘಟನೆ ನಡೆದಿದೆ.

ತಾಲೂಕಿನ ಉಡೇಗೋಳ ಗ್ರಾಮದ ಹತ್ತಿರದ ತುಂಗಭದ್ರಾ ನದಿಯಲ್ಲಿ ತಮ್ಮ ದನಗಳನ್ನು ಮನೆಗೆ ಹೊಡೆಯಲು ಹೋದಾಗ ದನಗಳ ಮೇಲೆ ದಾಳಿ ಮಾಡಲು ಹೊಂಚು ಹಾಕಿದ್ದ ಮೊಸಳೆ ದನಗಳು ಓಡಿ ಹೋದಾಗ, ನೀರು ಕುಡಿಯಲು ನದಿ ನೀರಿಗೆ ಇಳಿದ ಯುವಕನ ಮೇಲೆ ಎರಗಿದೆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಈತನ ತಂದೆ ನೀರಿಗೆ ಜಿಗಿದು ತಂದೆ ಮಗ ಇಬ್ಬರೂ ಸೇರಿ ಮೊಸಳೆಯನ್ನು ಓಡಿಸಿದ್ದಾರೆ.

ಮೊಸಳೆಯು ಯುವಕ ಅಜರುದ್ದೀನನ ಮುಂಗೈ ಹಿಡಿದಿದ್ದರಿಂದ ಕೈಗೆ ರಕ್ತಗಾಯವಾಗಿಳಿವೆ. ಈ ಯುವಕನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕಳುಹಿಸಿದ್ದು ಚಿಕಿತ್ಸ್ಸೆ ಪಡೆಯುತ್ತಿದ್ದಾನೆ. ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆಂದು ಯುವಕನ ಸಂಬAಧಿಕರು ತಿಳಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ, ತಾಲೂಕಿನ ರುದ್ರಪಾದ ಗ್ರಾಮದಲ್ಲಿಯೂ ಇದೇ ತುಂಗಭದ್ರಾ ನದಿಯಲ್ಲಿ ವ್ಯಕ್ತಿಯ ಮೇಲೆ ಮೊಸಳೆ ದಾಳಿಮಾಡಿದ್ದರಿಂದ ವ್ಯಕ್ತಿಯ ಕೈಮುರಿದಿತ್ತು. ನದಿಯಲ್ಲಿ ಅನೇಕ ಮೊಸಳೆಗಳಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಗಳಿರುವ ಸ್ಥಳಗಳನ್ನು ಗುರುತಿಸಿ ನದಿಗಳ ಪಕ್ಕದಲ್ಲಿ ಮೊಸಗಳಿರುವ ಬಗ್ಗೆ ಜಾಗೃತಿ ಫಲಕಗಳನ್ನು ಹಾಕಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Related