`ಸೂಪರ್ ಹೀರೋ’ ಸೋನು ಸೂದ್

`ಸೂಪರ್ ಹೀರೋ’ ಸೋನು ಸೂದ್

ಮುಂಬೈ: ನಟ ಸೋನು ಸೂದ್ ಶನಿವಾರ ಅಫ್ಘಾನಿಸ್ತಾನ ಬಿಕ್ಕಟ್ಟಿನ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಯುದ್ಧದಿಂದ ಹಾನಿಗೊಳಗಾದ ಆಫ್ಘನ್ ನಿರಾಶ್ರಿತರಾಗಿರುವ ಭಾರತೀಯರಿಗೆ  ಹೆಚ್ಚು ಬೆಂಬಲ ಬೇಕು ಎಂದು ಅಭಿಪ್ರಾಯಪಟ್ಟರು .
ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸೋನು ಸೂದ್ ಉದ್ಯೋಗದ ಅಗತ್ಯತೆ ಮತ್ತು ಅನೇಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಉತ್ತಮ ಜೀವನ’ ಕುರಿತು ಬರೆದಿದ್ದಾರೆ. ಜಗತ್ತಿನ ಒಗ್ಗಟ್ಟನ್ನು ಅಫ್ಘಾನಿಸ್ತಾನಕ್ಕೆ ತೋರಿಸಬೇಕು ಮತ್ತು ಮನೆಯಿಲ್ಲದ ಪ್ರತಿಯೊಂದು ಅಫ್ಘಾನ್ ಕುಟುಂಬಕ್ಕೆ ಉದ್ಯೋಗ ನೀಡುವ ಮೂಲಕ ಅವರು ಉತ್ತಮ ಜೀವನ ನಡೆಸಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ಬಗ್ಗೆ ಅವರು ಕಾಳಜಿ ತೋರಿಸಿದರು. ಅವರಿಗೆ ಸಹಾಯದ ಅಗತ್ಯವಿದೆಯೆಂದು ಹಂಚಿಕೊಂಡರು. ಸೋನು ಸೂದ್ ಅವರ ಅಭಿಮಾನಿಗಳು ಅವರ ಮನವಿಯನ್ನು ಬೆಂಬಲಿಸಿದರು ಮತ್ತು ಅವರನ್ನು `ಸೂಪರ್ ಹೀರೋ’ ಎಂದು ಕರೆದರು.

Related