ಅ.24ರಂದು ಭಾರತ-ಪಾಕ್ ಮುಖಾಮುಖಿ

ಅ.24ರಂದು ಭಾರತ-ಪಾಕ್ ಮುಖಾಮುಖಿ

ದುಬೈ: ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಕೂಟದ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅ.24ರಂದು ದುಬೈನಲ್ಲಿ ನಡೆಯಲಿದೆ.
ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಕೋವಿಡ್ ಕಾರಣಗಳಿಂದಾಗಿ ಯುಎಇ ಮತ್ತು ಒಮಾನ್ ಗೆ ಸ್ಥಳಾಂತರಿಸಲಾಗಿದೆ. ಬಿಸಿಸಿಐ ಆಯೋಜಕತ್ವದಲ್ಲಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್ ಝಯೀದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಒಮಾನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಅ. 17ರಿಂದ ವಿಶ್ವಕಪ್ ಆರಂಭವಾಗಲಿದ್ದು, 23ರವರೆಗೆ ಪಂದ್ಯಗಳು ನಡೆಯಲಿದೆ. ಬಾಂಗ್ಲಾದೇಶ, ಶ್ರೀಲಂಕಾ, ಐಲೆರ್ಂಡ್, ನೆದಲೆರ್ಂಡ್, ಸ್ಕಾಟ್ಲೆಂಡ್, ನಮೀಬಿಯಾ, ಒಮಾನ್, ಪಪುವಾ ನ್ಯೂ ಗ್ಯುನಿಯಾ ದೇಶಗಳು ಪಂದ್ಯದಲ್ಲಿ ಆಡಲಿದೆ.

Related