ರಮೇಶ್ ಪುತ್ರಿ ಆರತಕ್ಷತೆಗೆ ಸ್ಯಾಂಡಲ್‌ವುಡ್ ದಂಡು

ರಮೇಶ್ ಪುತ್ರಿ ಆರತಕ್ಷತೆಗೆ ಸ್ಯಾಂಡಲ್‌ವುಡ್ ದಂಡು

ನಟ- ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ನಗರದ ಕಾನ್‌ರಾಡ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.

ನಿಹಾರಿಕಾ ಮತ್ತು ಅಕ್ಷಯ್ ಮದುವೆ ಡಿ. ಕೊನೆಯಲ್ಲಿ ನಡೆದಿತ್ತು. ಕುಟುಂಬದವರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು. ಚಿತ್ರರಂಗ, ರಾಜಕೀಯ ಕ್ಷೇತ್ರ ಸೇರಿ ಹಲವು ಗಣ್ಯರಿಗೆಂದು ಆರತಕ್ಷತೆ ಆಯೋಜಿಸಲಾಗಿತ್ತು.

ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್ನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವರಾಜಕುಮಾರ್, ರವಿಚಂದ್ರನ್, ಉಪೇಂದ್ರ, ಸುದೀಪ್, ಪುನೀತ್ ರಾಜಕುಮಾರ್, ಯಶ್, ಶ್ರೀಮುರಳಿ, ಸುಮಲತಾ ಅಂಬರೀಷ್, ಡಾ. ಜಯಮಾಲಾ, ರಾಕ್‌ಲೈನ್ ವೆಂಕಟೇಶ್, ಮುನಿರತ್ನ, ದೊಡ್ಡಣ್ಣ ಸೇರಿ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಭಾಗವಹಿಸಿ ನಿಹಾರಿಕಾ ಮತ್ತು ಅಕ್ಷಯ್‌ಗೆ ಶುಭ ಹಾರೈಸಿದ್ದಾರೆ.

ಅಷ್ಟೇ ಅಲ್ಲ ನಟರಾದ ಸುದೀಪ್ ಮತ್ತು ಯಶ್ ಸೇರಿ ಹಲವರು ವೇದಿಕೆ ಮೇಲೆಯೇ ಸ್ಟೆಪ್ ಹಾಕಿದರು.

Related