100 ಕೋಟಿ ಡೋಸ್ ಲಸಿಕೆ ವಿತರಣೆ: ಸಚಿವ ಪ್ರಭು ಚವ್ಹಾಣ್ ಅಭಿನಂದನೆ

100 ಕೋಟಿ ಡೋಸ್ ಲಸಿಕೆ ವಿತರಣೆ: ಸಚಿವ ಪ್ರಭು ಚವ್ಹಾಣ್ ಅಭಿನಂದನೆ

ಔರಾದ್ : ನೂರು ಕೋಟಿ ಡೋಸ್ ಲಸಿಕೆ ವಿತರಣೆಯನ್ನು ಪೂರ್ಣಗೊಳಿಸುವ ಮೂಲಕ ಭಾರತ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಭಾರತದ ಈ ಮಹತ್ತರವಾದ ಸಾಧನೆಗೆ ಪ್ರಧಾನಿ ಮೋದಿ, ಕೋವಿಡ್ ಯೋಧರಿಗೆ ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಭಿನಂದನೆ ಸಲ್ಲಿಸಿದರು.
ಕೋವಿಡ್ ಸೋಂಕು ತಡೆಗೆ ಲಸಿಕೆಯೊಂದೇ ಸಂಜೀವಿನಿ ಎಂದು ಅರಿತ ಪ್ರಧಾನಿಯವರು, ಭಾರತದ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತಲೂ ಆಂದೋಲನ ರೀತಿಯಲ್ಲಿ ಲಸಿಕಾ ಅಭಿಯಾನ ಯೋಜನೆ ರೂಪಿಸಿದ್ದರು. ಇಂದಿಗೂ ಕೆಲವು ದೇಶಗಳು ಲಸಿಕೆ ಸಿಗದೇ ಪರದಾಡುತ್ತಿರುವಾಗ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ವಿತರಿಸುವ ಮೂಲಕ ಮಾದರಿಯಾಗಿದೆ.
ಮೊದಲಿಗೆ ಅನಾರೋಗ್ಯ ಪೀಡಿತರಿಗೆ ಲಸಿಕೆ ನೀಡುವ ಮೂಲಕ ಅಭಿಯಾನವನ್ನು ಆರಂಭಿಸಿ, ನಂತರದ ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಯಿತು. ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾದ ಭಾರತದಲ್ಲಿ ಲಸಿಕಾ ಅಭಿಯಾನ ಅಷ್ಟು ಸುಲಭವಾಗಿರಲಿಲ್ಲ. ಲಸಿಕೆ ವಿತರಣೆಗೆ ಇದ ಅಡಚಣೆಗಳನ್ನು ಮೀರಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳ್ಳಲು ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಕೋವಿಡ್ ತಡೆಯಲು ಲಸಿಕೆಯೊಂದೇ ಪರಿಣಾಮಕಾರಿ ಅಸ್ತ್ರವಾಗಿದೆ. ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಸಂಶಯಗಳನ್ನು ಇಟ್ಟುಕೊಳ್ಳದೇ ಇನ್ನೂ ಲಸಿಕೆ ಪಡೆಯದವರು ವಿಳಂಬ ಮಾಡದೇ ಕೂಡಲೇ ಲಸಿಕೆ ಪಡೆಯಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Related