ಹಸಿವಿನಿಂದ ಬಳಲುತ್ತಿರುವರಿಗೆ ಸಹಾಯ ಮಾಡಿ ಎಂದ ಹರ್ಷಿಕಾ ಪೂನಚ್ಚ

  • In Cinema
  • April 21, 2020
  • 1999 Views
ಹಸಿವಿನಿಂದ ಬಳಲುತ್ತಿರುವರಿಗೆ ಸಹಾಯ ಮಾಡಿ ಎಂದ ಹರ್ಷಿಕಾ ಪೂನಚ್ಚ

ಕೊರೋನಾ ಮಹಾಮಾರಿ ವೈರಸ್ ನಿಂದ ಸ್ಯಾಂಡಲ್ ವುಡ್‍ತಾರೆಯರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಜೊತೆಗೆ ತಾವಾಗಿಯೇ ಹೋಂ ಕ್ವಾರಂಟೇನ್ ನಲ್ಲಿದ್ದಾರೆ. ಈ ಕೊರೋನಾದಿಂದ ಸ್ಟಾರ್ ನಟ ನಟಿಯರು ಮನೆಯಲ್ಲಿ ಏನ್ ಮಾಡ್ತಿದ್ದಾರೆ ಗೊತ್ತಾ..?

ಹೌದು, ಕೊರೋನಾದಿಂದ ಸ್ಯಾಂಡಲ್ ವುಡ್ ಮಂದಿ ಮನೆ ಸೇರಿದ್ದಾರೆ. ಈಗ ಅವರ ದಿನಚರಿ ಕೂಡ ಬದಲಾಗಿದೆ. ಎಂದಿನಂತೆ ಅವರ ಕೆಲಸ ನಡೆಯುತ್ತಿಲ್ಲ. ಜೊತೆಗೆ ಕೊರೋನಾ ಬಗ್ಗೆ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ತಮ್ಮ ಟ್ವೀಟರ್ ಖಾತೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹಾಟ್ ಲುಕ್‍ನ ಕೊಡಗಿನ ಕುವರಿ ಹರ್ಷಿಕಾ ಪೂನಚ್ಚ ಫೋಟೋ ಶೂಟ್, ಶೂಟಿಂಗ್ ಅಂತಾ ಸಖತ್ ಬ್ಯೂಸಿಯಾಗಿದ್ರೂ. ಈ ಕೊರೋನಾದಿಂದ ನಟಿ ಹರ್ಷಿಕಾ ಪೂನಚ್ಚ ಕೂಡ ಮನೆಯಲ್ಲಿ ಇದ್ದಾರೆ. ಜೊತೆಗೆ ವಿಭಿನ್ನ ರೀತಿಯ ಅಡುಗೆ ಮಾಡೊದ್ರಲ್ಲಿ ಬ್ಯೂಸಿಯಾಗಿದ್ದಾರೆ. ತಮ್ಮ ಅಮೂಲ್ಯ ಸಮಯವನ್ನು ಪ್ರಾಣಿ ಪಕ್ಷಿಗಳಿಗೆ ಆಹಾರ ಸಿದ್ದಪಡಿಸಿ ತಾವೇ ಸ್ವತಃ ಆಹಾರವನ್ನು ನೀಡುತ್ತಿದ್ದಾರೆ. ಆದಷ್ಟು ಸಾಕು ಪ್ರಾಣಿಗಳಿಗೆ ಹಾಗೇ ಹೊರಗಿನ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ, ಪ್ರೀತಿ ಮಾಡಿ ,ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ.

ಜೊತೆಗೆ ಎಂದಿನಂತೆ ಎಲ್ಲರೂ ಹಸಿವಿನಿಂದ ಬಳಲುತ್ತಿರುವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಈ ಮಹಾಮಾರಿ ಕೊರೋನಾದಿಂದ ಆದಷ್ಟು ಬೇಗ ಬಿಡುಗಡೆ ಆಗುತ್ತಿವಿ. ಎಲ್ಲರೂ ಕೈ ಜೋಡಿಸಿ ಸಹಾಯ ಮಾಡೋಣ ಎಂದಿದ್ದಾರೆ.

Related